ಮ್ಯಾನ್ಮಾರ್‍ನಲ್ಲಿ ಸೇನೆ-ಬಂಡುಕೋರರ ನಡುವೆ ನಡೆದ ಘರ್ಷಣೆಯಲ್ಲಿ 90 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Myanmar

ಮ್ಯಾಂಗ್‍ಡಾನ್, ಆ.27- ಮ್ಯಾನ್ಮಾರ್‍ನ ರಾಖಿನ್ ರಾಜ್ಯದಲ್ಲಿ ಭದ್ರತಾಪಡೆಗಳು ಮತ್ತು ರೋಹಿಂಗ್ಯ ಬಂಡುಕೋರರ ನಡುವೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭೀಕರ ಕಾಳಗದಲ್ಲಿ 90ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ. ಹಿಂಸಾಚಾರಕ್ಕೆ ಹೆದರಿ ಸಾವಿರಾರು ಮಂದಿ ಸುರಕ್ಷಿತ ಸ್ಥಳಗಳಿಗೆ ಪಲಾಯವಾಗಿದ್ದಾರೆ.  ಮ್ಯಾಂಗ್‍ಡಾನ್ ಪಟ್ಟಣದ ಬಳಿ ಬಂಡುಕೋರರು ನಾಲ್ವರು ಗ್ರಾಮಾಧಿಕಾರಿಗಳನ್ನು ಗುಂಡಿಟ್ಟು ಕೊಂದಿದ್ದಾರೆ. ಈ ಭೀಕರ ಕಾಳಗದಲ್ಲಿ 12 ಭದ್ರತಾ ಅಧಿಕಾರಿಗಳು ಮತ್ತು 77 ಬಂಡುಕೋರರು ಸಾವನ್ನಪ್ಪಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಶುಕ್ರವಾರ ಮುಂಜಾನೆ ಹಲವಾರು ಬಂಡುಕೋರರು ಬಂದೂಕುಗಳು ಮತ್ತು ಗ್ರೆನೇಡ್‍ಗಳೊಂದಿಗೆ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ನಂತರ ಘರ್ಷಣೆ ಭುಗಿಲೆದ್ದಿದೆ ಎಂದು ಮ್ಯಾನ್ಮಾರ್ ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin