ಸಜೀವ ಬಾಂಬ್ ಹೊತ್ತು ಓಡಿ 400 ಮಕ್ಕಳ ಜೀವ ರಕ್ಷಿಸಿದ ಸೂಪರ್ ಕಾಪ್..!

Police01

ಭೋಪಾಲ್, ಆ.27- ಶಾಲೆಯೊಂದರ ಬಳಿ ಪತ್ತೆಯಾಗಿದ್ದ 10 ಕೆಜಿ ತೂಕದ ಬಾಂಬ್ ಹೊತ್ತುಕೊಂಡು ಓಡಿ ಸುಮಾರು ಒಂದು ಕಿ.ಮೀ. ದೂರ ಸಾಗಿಸಿದ ಪೊಲೀಸ್ ಪೇದೆಯೊಬ್ಬರು 400 ಮಕ್ಕಳ ಜೀವ ರಕ್ಷಿಸಿದ ಸಿನಿಮೀಯ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಚಿಟೋರಾದಲ್ಲಿ ನಡೆದಿದೆ.
ಅಭಿಷೇಕ್ ಪಾಟೀಲ್ ಎಂಬುವರೇ 400 ಮಕ್ಕಳನ್ನು ಬಾಂಬ್ ಸ್ಪೋಟದಿಂದ ರಕ್ಷಿಸಿದ ಹೆಡ್ ಕಾನ್ಸ್‍ಟೆಬಲ್. ಅವರು 10 ಕೆಜಿ ತೂಕದ ಸಜೀವ ಬಾಂಬ್ ಹೊತ್ತುಕೊಂಡು ವೇಗವಾಗಿ ಓಡುತ್ತಿರುವ 12 ಸೆಕೆಂಡ್‍ಗಳ ದೃಶ್ಯ ವೈರಲ್ ಆಗಿದೆ.

ಶುಕ್ರವಾರ ಬೆಳಗ್ಗೆ ಶಾಲೆ ಬಳಿ ಬಾಂಬ್ ಪತ್ತೆಯಾದಾಗ 400 ಮಕ್ಕಳು ಅಲ್ಲಿದ್ದರು. ಶಾಲಾ ಮುಖ್ಯಸ್ಥರು ಪೊಲೀಸರಿಗೆ ಸುದ್ದಿ ತಿಳಿಸಿ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಬೀಗ ಹಾಕಿದರು. ಅಲ್ಲಿಗೆ ಧಾವಿಸಿದ ಪಾಟೀಲ್ ಬಾಂಬನ್ನು ಹೊತ್ತುಕೊಂಡು ದೂರ ಓಡಿದರು. ಈ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದರೆ ಸುಮಾರು 500 ಮೀಟರ್ ವ್ಯಾಪ್ತಿಯೊಳಗೆ ಭಾರೀ ಹಾನಿ ಉಂಟಾಗುವ ಸಾಧ್ಯತೆ ಇತ್ತು. 400 ಮಕ್ಕಳ ಜೀವಕ್ಕೆ ಅಪಾಯವಾಗುತ್ತಿತ್ತು.  ನಂತರ ಬಾಂಬ್ ನಿಷ್ಕ್ರಿಯ ದಳ ಸ್ಪೋಟಕವನ್ನು ತಟಸ್ಥಗೊಳಿಸಿದರು. ಭಾರಿ ಅನಾಹುತ ತಪ್ಪಿಸಿದ ಮುಖ್ಯ ಪೇದೆ ಅಭಿಷೇಕ್ ಪಾಟೀಲ್‍ಗೆ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಸತೀಶ್ ಸಕ್ಸೇನಾ ಬಹುಮಾನ ಘೋಷಿಸಿದ್ದಾರೆ.

Facebook Comments

Sri Raghav

Admin