ಹರಿಯಾಣದಲ್ಲಿ ಮತ್ತೆ ಹಿಂಸಾಚಾರ, ಮಾಧ್ಯಮದವರ ಮೇಲೆ ರೇಪಿಸ್ಟ್ ಬಾಬಾ ಬೆಂಬಲಿಗರ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

Rapist--01

ಚಂಡೀಗಢ/ಸಿರ್ಸಾ, ಆ.27- ಅತ್ಯಾಚಾರಿ ದೇವ ಮಾನವ ರಾಮ್‍ರಹೀಮ್ ಸಿಂಗ್ ಬಾಬಾ ಬೆಂಬಲಿಗ ಗೂಂಡಾಗಳು ಇಂದು ಮತ್ತೆ ಹಿಂಸಾಚಾರ ಮುಂದುವರಿಸಿದ್ದು ಮಾಧ್ಯಮ ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಹರಿಯಾಣದ ಪಿರ್ಸಾನದಲ್ಲಿ ಬಾಬಾ ಬೆಂಬಲಿಗರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಭಾರೀ ಬಿಗಿ ಭದ್ರತೆಯ ನಡುವೆಯೂ ಗೂಂಡಾಗಳು ತಮ್ಮ ಪುಂಡಾಟ ಮುಂದುವರೆಸಿದ್ದು, ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಬಾ ಅನುಯಾಯಿಗಳ ಬಂಧನ:

ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ದೋಷಿ ಎಂದು ಘೋಷಣೆ ಹೊರಬೀಳುತ್ತಿದ್ದಂತೆ ಹಿಂಸಾಚಾರದಿಂದ 37 ಮಂದಿ ಬಲಿಯಾಗಿ ಹೈರಾಣಾದ ಹರಿಯಾಣದಲ್ಲಿ ಮತ್ತೆ ಗಲಭೆಗೆ ಸಜ್ಜಾಗುತ್ತಿದ್ದ ವಿವಾದಿತ ಸಿಂಗ್‍ನ ಕೆಲವು ಅನುಯಾಯಿಗಳನ್ನು ವಿವಿಧೆಡೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಾಠಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದೋಗಾ ಪ್ರದೇಶದಲ್ಲಿ ಬಾಬಾ ಅನುಯಾಯಿಗಳು ಗುಂಪುಗೂಡಿ ಹಿಂಸಾಚಾರಕ್ಕೆ ಸಜ್ಜಾಗುತ್ತಿದ್ದಂತೆ ಪೊಲೀಸರು ಕೆಲವರನ್ನು ಬಂಧಿಸಿದರು.

Untitled-1

ಹರಿಯಾಣ ಮತ್ತು ಪಂಜಾಬ್‍ನಲ್ಲಿ ಮತ್ತೆ ಹಿಂಸಾಚಾರ ಮರುಕಳಿಸದಂತೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 10 ಜಿಲ್ಲೆಗಳಲ್ಲಿ ಕಫ್ರ್ಯೂ ಮುಂದುವರಿಸಲಾಗಿದೆ. ಗಲಭೆಯ ಕೇಂದ್ರ ಬಿಂದುವಾದ ಸಿರ್ಸಾದಲ್ಲಿ ಇಂದು ಮುಂಜಾನೆ 6 ರಿಂದ ಬೆಳಗ್ಗೆ 11 ಗಂಟೆವರೆಗೆ ಐದು ಗಂಟೆಗಳ ಕಾಲ ಕಫ್ರ್ಯೂ ಸಡಿಸಲಾಗಿತ್ತು. ಈ ಅವಧಿಯಲ್ಲಿ ಅಂಗಡಿ-ಮುಂಗಟ್ಟುಗಳು ತೆರೆಯಲು ಅನುಮತಿ ನೀಡಲಾಗಿತ್ತು.

Rapeist--02

ಗಲಭೆ ಪೀಡಿತ ಪ್ರದೇಶಗಳಲ್ಲಿ ಸಿಂಗ್ ಭೇಟಿ :

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ರಾಜ್ಯದ ನಾಲ್ಕು ಗಲಭೆ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸುತ್ತಿದ್ದಾರೆ.

Facebook Comments

Sri Raghav

Admin