ಇಸ್ರೇಲ್’ನಲ್ಲಿ ಕುಮಾರಸ್ವಾಮಿ ಅಂಡ್ ಟೀಮ್ ಕೃಷಿ ತಂತ್ರಜ್ಞಾನ ಅಧ್ಯಯನ

ಈ ಸುದ್ದಿಯನ್ನು ಶೇರ್ ಮಾಡಿ

Isrel 03

ಹೈಫಾ(ಇಸ್ರೇಲ್), ಆ.28- ಕೃಷಿ ಹಾಗೂ ಪಶುಸಂಗೋಪನೆ ಬಗ್ಗೆ ಅಧ್ಯಯನಕ್ಕಾಗಿ ತೆರಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ತಂಡ ಇಸ್ರೇಲ್‍ನ ರಾಯಭಾರಿ ಹಾಗೂ ಕೃಷಿ ತಜ್ಞ ಡಾ.ಅವಿರ್‍ಬಾರ್‍ಜುರ್ ಅವರೊಂದಿಗೆ ಮೊದಲ ಸಮಾಲೋಚನಾ ಸಭೆ ನಡೆಸಿತು. ಇಸ್ರೇಲ್‍ನ ಹೈಫಾದಲ್ಲಿ ನಡೆದ ಸಭೆಯಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು ಇಸ್ರೇಲ್ ಮಾದರಿಯಲ್ಲೇ ನಮ್ಮಲ್ಲಿ ಕೃಷಿ ಅಭಿವೃದ್ಧಿಯಾಗಬೇಕು.

Isrel 01

ಅದು ತಮ್ಮ ಉದ್ದೇಶವಾಗಿದ್ದು, ಅದಕ್ಕಾಗಿ ಇಸ್ರೇಲ್‍ನ ಕೃಷಿ ತಂತ್ರಜ್ಞಾನ ಅಧ್ಯಯನಕ್ಕಾಗಿ ಬಂದಿರುವುದಾಗಿ ತಿಳಿಸಿದರು. ನಮ್ಮ ರೈತರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸುತ್ತೇವೆ. ಸಣ್ಣ ಮತ್ತು ದೊಡ್ಡ ರೈತರಿಗೂ ಕೂಡ ಸರ್ಕಾರದ ಮೂಲಕ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಆರ್ಥಿಕ ನೆರವು, ತಂತ್ರಜ್ಞಾನವನ್ನು ಒದಗಿಸಲಿದ್ದು, ರೈತರು ಪ್ರಾಮಾಣಿಕವಾಗಿ ಕೆಲಸ ಮಾಡಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.

Isrel 04

ಸಭೆಯಲ್ಲಿ ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ ಬಸವರಾಜ್ ಹೊರಟ್ಟಿ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಡೆಗೆಲ್‍ನ ಸಿಇಒ ಓಸ್‍ಹರ್ಪಾಸ್, ಇಂಡೋ ಇಸ್ರೇಲ್ ವ್ಯಾಪಾರ ಸಂಘಟನೆಯ ಅಧ್ಯಕ್ಷ ಆಸೀಫ್ ಮತ್ತಿತರರು ಪಾಲ್ಗೊಂಡಿದ್ದರು.

Isrel 05

Isrel 06

Facebook Comments

Sri Raghav

Admin