ಕಬ್ಬಿಣ ಅದಿರು ಹರಾಜು ವಿರುದ್ಧ ಸುಪ್ರೀಂನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Mining--01

ನವದೆಹಲಿ, ಆ.28-ಕರ್ನಾಟಕದಲ್ಲಿ ಕಬ್ಬಿಣ ಅದಿರು ಇ-ಹರಾಜು ರದ್ದುಗೊಳಿಸಲು ಕೋರಿ ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟ (ಎಫ್‍ಐಎಂಐ) ಮತ್ತು ವೇದಾಂತ ಸಲ್ಲಿಸಿದ್ದ ಮನವಿಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.  ನ್ಯಾಯಮೂರ್ತಿಗಳಾದ ರಂಜನ್ ಗೊಗೈ ಮತ್ತು ನವೀನ್ ಸಿಂಗ್ ಅವರನ್ನು ಒಳಗೊಂಡ ಪೀಠವು ಈ ಕುರಿತು ಸಲ್ಲಿಸಲಾದ ಸಲಹೆಗಳಿಗೆ ಅಸಮ್ಮತಿ ಸೂಚಿಸಿದೆ. ಕರ್ನಾಟಕದಲ್ಲಿ ಕಬ್ಬಿಣ ಅದಿರು ಹರಾಜಿಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಫ್‍ಐಎಂಐ ಮತ್ತು ವೇದಾಂತ ಸಲ್ಲಿಸಿರುವ ಅರ್ಜಿಗಳನ್ನು ನಾವು ತಿರಸ್ಕರಿಸುತ್ತೇವೆ. ಇ-ಹರಾಜು ಮೂಲಕ ಕಬ್ಬಿಣ ಅದಿರು ಹರಾಜು ಹಾಕುವುದು ಈಗಿರುವ ಸೂಕ್ತ ವ್ಯವಸ್ಥೆಯಾಗಿದೆ ಎಂದು ಪೀಠ ಹೇಳಿದೆ.

ಸುಪೀಂಕೋರ್ಟ್ ಏಪ್ರಿಲ್ 18, 2013ರಂದು ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಆದರೆ ಪ್ರತಿವರ್ಷ 30 ದಶಲಕ್ಷ ಲನ್‍ಗಳಿಗೆ ಮೀರದಂತೆ ಅದಿರು ತೆಗೆಯಲು ನಿರ್ಬಂಧ ವಿಧಿಸಿತ್ತು.

Facebook Comments

Sri Raghav

Admin