ಡೇರಾ ಅನುಯಾಯಿಗಳಿಗೆ ಶಾಸ್ತಿ ಮಾಡಲು ಕಲ್ಲು-ದೊಣ್ಣೆಗಳೊಂದಿಗೆ ಸಜ್ಜಾಗಿದ್ದಾರೆ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

Dera--01

ಸಿರ್ಸಾ, ಆ.28-ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್‍ರಹೀಂ ಸಿಂಗ್ ಅತ್ಯಾಚಾರಿ ಎಂದು ಕೋರ್ಟ್ ಘೋಷಿಸುತ್ತಿದ್ದಂತೆ ವ್ಯಾಪಕ ಹಿಂಸಾಚಾರ ನಡೆಸಿ ಸಾವು-ನೋವು, ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾದ ಡೇರಾ ಸಚ್ಚಾ ಸೌಧ ಬೆಂಬಲಿಗರಿಗೆ ತಕ್ಕ ಪಾಠ ಕಲಿಸಲು ಅಕ್ಕಪಕ್ಕದ ಗ್ರಾಮಸ್ಥರು ಸಜ್ಜಾದ್ದಾರೆ. ಶಿಕ್ಷೆ ಪ್ರಮಾಣ ತೀರ್ಪು ಹೊರ ಬಿದ್ದ ನಂತರ ಬಾಬಾ ಅನುಯಾಯಿಗಳು ಹಿಂಸಾಚಾರಕ್ಕೆ ಇಳಿದಿದ್ದೇ ಆದರೆ ಅವರನ್ನು ಹಿಮ್ಮೆಟ್ಟಿಸಲು ಗ್ರಾಮಸ್ಥರು ಕಲ್ಲುಗಳು, ಕಬ್ಬಿಣದ ಸರಳು ಮತ್ತು ದೊಣ್ಣೆಗಳೊಂದಿಗೆ ಸಜ್ಜಾಗಿದ್ದಾರೆ.

Dera  01

ಡೇರಾ ಸಚ್ಚಾ ಸೌಧದಿಂದ 500 ಮೀಟರ್ ದೂರದಲ್ಲಿರುವ ಶಹಾಪುರ್ ಬೇಗು ಗ್ರಾಮದ ನಿವಾಸಿಗಳು ಈಗಾಗಲೇ ಈ ಶಸ್ತ್ರಾಸ್ತ್ರಗಳನ್ನು ಒಟ್ಟು ಮಾಡಿದ್ದು, ಬಾಬಾನ ಬೆಂಬಲಿಗರ ಸಾಂಭವ್ಯ ಹಿಂಸಾಚಾರವನ್ನು ಹಿಮ್ಮೆಟ್ಟಿಸಲು ಸರ್ವ ಸನ್ನದ್ಧರಾಗಿದ್ದಾರೆ.  ಈ ಗ್ರಾಮವು ಸುಮಾರು 9,000 ಜನಸಂಖ್ಯೆ ಹೊಂದಿದ್ದು, ಗ್ರಾಮದ ಮುಖ್ಯಸ್ಥ ಆದೇಶದಂತೆ ಹಿಂಸಾಚಾರ ಪ್ರತಿರೋಧಿಸಲು ಸಿದ್ಧವಾಗಿದ್ದಾರೆ.

Dera  02

Dera  03

Facebook Comments

Sri Raghav

Admin