ಡೇರಾ ಸಚ್ಚಾ ಸೌಧಕ್ಕೆ ಬಾಬಾ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಉತ್ತರಾಧಿಕಾರಿಯಾಗುವಳೇ..?

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim-Singh--01

ಚಂಢೀಗಡ, ಆ.28- ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಮತ್ತು ಸ್ವಘೋಷಿತ ದೇವಮಾನವ ಬಾಬಾ ಗುರ್ಮೀತ್ ರಾಮ್‍ರಹೀಂ ಸಿಂಗ್‍ನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಆತನ ಉತ್ತರಾಧಿಕಾರಿ ಎಂದೇ ಅನುಯಾಯಿಗಳು ಬಿಂಬಿಸುತ್ತಿದ್ದಾರೆ. ಆಕೆ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಪಾಪಾನ ದೇವದೂತೆ, ಜನಹಿತೈಷಿ, ನಿರ್ದೇಶಕಿ, ಸಂಪಾದಕಿ ಮತ್ತು ನಟಿ ಎಂದು ಬಣ್ಣಿಸಿಕೊಳ್ಳುತ್ತಿದ್ದಾಳೆ.
ಬಾಬಾ ವಿರುದ್ಧ ತೀರ್ಪು ಘೋಷಣೆಯಾದ ಶುಕ್ರವಾರ ಸಿಂಗ್ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆಗಮಿಸಿದಾಗ 30ರ ಹರೆಯದ ಗ್ಲಾಮರ್ ಹನಿಪ್ರೀತ್ ಆತನ ಜೊತೆಯಲ್ಲೇ ಇದ್ದಳು. ಹನಿಪ್ರೀತ್ ಟ್ವೀಟರ್‍ನಲ್ಲಿ 10 ಲಕ್ಷ ಹಾಗೂ ಫೇಸ್‍ಬುಕ್‍ನಲ್ಲಿ 5 ಲಕ್ಷಕ್ಕೂ ಅದಿಕ ಫಾಲೋವರ್‍ಗಳನ್ನು ಹೊಂದಿದ್ದಾಳೆ.

Facebook Comments

Sri Raghav

Admin