ನಾಳೆ ವರುಣಾ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah---01

ತಿ.ನರಸೀಪುರ, ಆ.28- ವರುಣಾ ಮತ್ತು ತಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುವರು ಎಂದು ಶಾಸಕ ರಮೇಶ್ ಮುದ್ದೇಗೌಡ ತಿಳಿಸಿದರು. ಪಟ್ಟಣದ ಪಿಡಬ್ಲೂಡಿ ಅತಿಥಿ ಗೃಹದಲ್ಲಿ ನಡೆದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಿ.ನರಸೀಪುರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಅಭಿವೃದ್ದಿ ಕಾರ್ಯಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹೆಳವರಹುಂಡಿ, ಬೈರಾಪುರ ಹೊಸಬಡಾವಣೆ, ತ್ರಿವೇಣಿನಗರ, ಆಲಗೂಡು, ಪುರಸಭೈ ವ್ಯಾಪ್ತಿಯ ಹಲವು ವಾರ್ಡ್‍ಗಳಲ್ಲಿ 18 ಕೋಟಿ ರೂಗಳ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ದಿ, 62 ಕೋಟಿ ರೂ ಅನುದಾನದಲ್ಲಿ ತಲಕಾಡು ಮಾಧವಮಂತ್ರಿ ಅಣೆಕಟ್ಟೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆಂದು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿರುವುದರಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.ಕ್ಷೇತ್ರಾಧ್ಯಕ್ಷರಾದ ನೀವು ಹಲವು ತಿಂಗಳು ಕಳೆದರೂ ಕಾರ್ಯಕರ್ತರ ಸಭೆಯನ್ನು ಕರೆಯದೇ ಸಿಎಂ ರವರು ಆಗಮಿಸುವ ಸಂದರ್ಭ ಕಾರ್ಯಕರ್ತರಿಗೆ ಕರೆ ಮಾಡಿ ಸಭೆಗೆ ಬನ್ನಿ ಎಂದು ಕರೆಯುವುದು ಸರಿಯಲ್ಲ. ಹೀಗಾದರೆ ಕಾರ್ಯಕರ್ತರ ಸಮಸ್ಯೆಗಳನ್ನು ಕೇಳುವರ್ಯಾರು ಎಂದು ಕ್ಷೇತ್ರಾಧ್ಯಕ್ಷ ರಮೇಶ್ ಮುದ್ದೇಗೌಡರ ವಿರುದ್ದ ಮುಖಂಡ ಆಲಗೂಡು ಘಟಕಾ ಮಹದೇವು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಸ್ವಾಮಿನಾಥ್, ಬಿ.ಮರಯ್ಯ ಅಮ್ಜದ್‍ಖಾನ್, ಹೆಳವರಹುಂಡಿ ಸೋಮು, ಮಾಧ್ಯಮ ವಕ್ತಾರ ಸಂತೃಪ್ತಿಕುಮಾರ್, ಪಿ.ಪುಟ್ಟರಾಜು, ಕೆಂಪಯ್ಯನಹುಂಡಿ ಮಹದೇವಣ್ಣ, ಮಾಜಿ ಜಿ.ಪಂ ಸದಸ್ಯ ಮಹದೇವು, ತಾ.ಪಂ ಮಾಜಿ ಅಧ್ಯಕ್ಷ ಅಂದಾನಿ ಇತರರು ಇದ್ದರು.

Facebook Comments

Sri Raghav

Admin