ಮಹಾರಾಷ್ಟ್ರದಲ್ಲಿ ಬಸ್-ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--012

ಪುಣೆ, ಆ.28-ನಿಂತಿದ್ದ ಟೆಂಪೋಗೆ ಬಸ್ ಡಿಕ್ಕಿಯಾಗಿ 9 ಪ್ರಯಾಣಿಕರು ಮೃತಪಟ್ಟು, ಇತರ 12 ಮಂದಿ ತೀವ್ರ ಗಾಯಗೊಂಡ ಘಟನೆ ಇಂದು ನಸುಕಿನಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಾರಾಯಣಗಾಂವ್ ಬಳಿ ಸಂಭವಿಸಿದೆ. ಈ ಅಪಘಾತ ಸಂಭವಿಸಿದಾಗ ಆ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿತ್ತು.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪುಣೆಯಿಂದ ನಾಸಿಕ್‍ನ ತ್ರಯಂಬಕೇಶ್ವರ್‍ಗೆ ತೆರಳುತ್ತಿದ್ದಾಗ ಪುಣೆಯಿಂದ 77 ಕಿ.ಮೀ. ದೂರದಲ್ಲಿ ಮುಂಜಾನೆ 1.45ರಲ್ಲಿ ಈ ಅಪಘಾತ ಸಂಭವಿಸಿತು ಎಂದು ನಾರಾಯಣಗಾಂವ್ ಪೊಲೀಸರು ತಿಳಿಸಿದ್ದಾರೆ.

ರಸ್ತೆ ಪಕ್ಕದಲ್ಲಿ ನಿಂತಿದ್ದ ಈರುಳ್ಳಿ ಟೆಂಪೋ ಭಾರೀ ಮಳೆಯಿಂದಾಗಿ ಚಾಲಕನಿಗೆ ಕಾಣದೇ ರಭಸವಾಗಿ ಅಪ್ಪಳಿಸಿತು. ಈ ದುರಂತದಲ್ಲಿ 9 ಪ್ರಯಾಣಿಕರು ಮೃತಪಟ್ಟು, 12 ಮಂದಿ ಗಾಯಗೊಂಡರು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

Facebook Comments

Sri Raghav

Admin