ಮೋದಿ ಜಾಣ ನಡೆಗೆ ಕೊನೆಗೂ ತಲೆಬಾಗಿದ ಚೀನಾ, ಡೋಕ್ಲಾಮ್ ಬಿಕ್ಕಟ್ಟು ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Dovlam--01

ನವದೆಹಲಿ, ಆ.28- ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ರಾಜನೀತಿ, ಚಾಣಾಕ್ಷ ನಡೆಯಿಂದ ಬೆಚ್ಚಿಬಿದ್ದ ಚೀನಾ ಡೊಕ್ಲಾಂನಲ್ಲಿ ನಿಯೋಜಿಸಿದ್ದ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದೆ. ಭಾರತ ಮತ್ತು ಚೀನಾ ನಡುವೆ ಸೇನಾ ಸಂಘರ್ಷದ ಆತಂಕ ಸೃಷ್ಟಿಸಿದ್ದ ಈಶಾನ್ಯ ರಾಜ್ಯ ಸಿಕ್ಕಿಂನ ಡೊಕ್ಲಾಂ ಬಿಕ್ಕಟ್ಟು ಎರಡು ತಿಂಗಳ ನಂತರ ಬಗೆಹರಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜಾಣ ಮತ್ತು ಚಾಣಾಕ್ಷ ವಿದೇಶಾಂಗ ನೀತಿಯಿಂದ ಕೊನೆಗೂ ಹಠಮಾರಿ ಚೀನಾ ತಲೆಬಾಗಿದೆ.

ವಿವಾದದ ಕೇಂದ್ರವಾಗಿದ್ದ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ ನಿಯೋಜನೆಗೊಂಡಿದ್ದ ಗಡಿ ಪಹರೆ ಸಿಬ್ಬಂದಿಯನ್ನು ತ್ವರಿತವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಸಮ್ಮತಿ ಸೂಚಿಸುವ ಮೂಲಕ ಈ ಗಂಭೀರ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ.
ಮೋದಿ ಚೀನಾದ ಕ್ಸಿಮೆನ್‍ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಗೆ ಪ್ರಯಾಣ ಬೆಳೆಸುವುದಕ್ಕೆ ಒಂದು ವಾರದ ಮೊದಲೇ ಈ ಸಮಸ್ಯೆ ಇತ್ಯರ್ಥಗೊಂಡಿರುವುದು ಉಭಯ ದೇಶಗಳ ನಡುವಣ ಸಂಬಂಧವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಲ್ಲಿ ಎರಡೂ ದೇಶಗಳು ಈ ನಿಟ್ಟಿನಲ್ಲಿ ಸೌಹಾರ್ದಯುತ ಸಮಾಲೋಚನೆ ನಡೆಸಿ ಬಿಕ್ಕಟ್ಟು ಇತ್ಯರ್ಥಕ್ಕಾಗಿ ಪರಸ್ಪರ ಪೂರಕ ವಿಚಾರಗಳು, ಅಭಿಪ್ರಾಯಗಳು ಮತ್ತು ಹಿತಾಸಕ್ತಿಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿವೆ ಎಂದು ವಿದೇಶಾಂ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ‘ಉಭಯ ದೇಶಗಳ ರಾಜತಾಂತ್ರಿಕರು ನಡೆಸಿದ ಮಾತುಕತೆ ಫಲಪ್ರದವಾಗಿದೆ. ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರೀ ಪ್ರಮಾಣದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ನಿರ್ಧರಿಸಿವೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆಗೆ ಮುನ್ನವೇ ಈ ಬಿಕ್ಕಟ್ಟು ಸಂಪೂರ್ಣ ನಿವಾರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.  ಡೊಕ್ಲಾಂ ಗಡಿಯಲ್ಲಿ ಚೀನಾ ರಸ್ತೆ ನಿರ್ಮಾಣವನ್ನು ಭಾರತ ವಿರೋಧಿಸಿದಾಗ ಸಣ್ಣದಾಗಿ ಆರಂಭಗೊಂಡ ವಿವಾದವು ಜೂನ್‍ನಿಂದ ಭುಗಿಲೆದ್ದು ಪರಸ್ಪರ ಘರ್ಷಣೆ, ಆರೋಪ-ಪ್ರತ್ಯಾರೋಪಗಳಿಂದ ಡೊಕ್ಲಾಂನಲ್ಲಿ ಎರಡೂ ಕಡೆಯ ಯೋಧರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧರಾಗಿ ಕದನದ ವಾತಾವರಣ ನಿರ್ಮಾಣಗೊಂಡಿತ್ತು. ಈ ಬೆಳವಣಿಗೆಯಿಂದ ಏಷ್ಯಾ ಸೇರಿದಂತೆ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೂ ಸಹ ಆತಂಕಗೊಂಡಿದ್ದವರು.

ಚೀನಾಗೆ ಪಾಕಿಸ್ತಾನ ಬೆಂಬಲ ನೀಡಿದ್ದರೆ, ಭಾರತಕ್ಕೆ ಜಪಾನ್, ಮ್ಯಾನ್ಯಾರ್, ಭೂತಾನ್ ದೇಶಗಳು ಸಾಥ್ ನೀಡಿದ್ದವು. ಈ ವಿವಾದವನ್ನು ಪರಸ್ಪರ ನೇರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ವಿಶ್ವಸಂಸ್ಥೆ ಮತ್ತು ಅಮೆರಿಕ ಪುನರಾವರ್ತಿತ ಸಲಹೆ ನೀಡದ್ದವು.

Facebook Comments

Sri Raghav

Admin