ಲಕ್ಷಾಂತರ ಜನರ ಅಶೋತ್ತರಗಳಿಗೆ ರೆಕ್ಕೆಯಾದ ಜನ್‍ಧನ್ : ಪ್ರಧಾನಿ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Modi

ನವದೆಹಲಿ, ಆ.28-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಜನ್‍ಧನ್ ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಮೂರು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಇದಕ್ಕೆ ಕಾರಣರಾದ ದೇಶದ ಜನರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಯೋಜನೆ ಲಕ್ಷಾಂತರ ಜನರ ಆಶೋತ್ತರಗಳಿಗೆ ರೆಕ್ಕೆಯಾಗಿದೆ ಎಂದು ಅವರು ಟ್ವೀಟರ್‍ನಲ್ಲಿ ಬಣ್ಣಿಸಿದ್ದಾರೆ.

ಈ ಯೋಜನೆಯಿಂದ 30 ಕೋಟಿ ಜನರು ಅದರಲ್ಲೂ ಬಡವರು ಪ್ರಯೋಜನ ಪಡೆದಿದ್ದಾರೆ. 16,500 ಕೋಟಿ ರೂ.ಗಳು ಸಂದಾಯವಾಗಿದೆ. ಬಡವರು, ತುಳಿತಕ್ಕೆ ಒಳಗಾದವರು ಮತ್ತು ಆರ್ಥಿಕ ದುರ್ಬಲರಿಗೆ ವರದಾನವಾದ ಈ ಯೋಜನೆ ಒಂದು ಕ್ರಾಂತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.  ಗುಣಾತ್ಮಕ ಮತ್ತು ಅನ್ವೇಷಣ್ಮಾತಕ ಯೋಜನೆಗಳ ಮೂಲಕ ಬಡವರ ಜನರ ಬದುಕಿನಲ್ಲಿ ಮಹತ್ವದ ಪರಿವರ್ತನೆ ತರಲು ತಮ್ಮ ಸರ್ಕಾರ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಅವರು ಹೇಳಿದ್ಧಾರೆ.

Facebook Comments

Sri Raghav

Admin