ವಿಜಯಪುರದಲ್ಲಿ ಮನೆ ಮೇಲ್ಛಾವಣಿ ಕುಸಿದು ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

3-Ded-Vijayapur--01

ವಿಜಯಪುರ, ಆ.28-ಮನೆಯ ಮೇಲ್ಛಾವಣಿ ಕುಸಿದು ಮೂವರು ದುರ್ಮರಣಕ್ಕೀಡಾಗಿರುವ ಘಟನೆ ನಗರದ ರಾಮಮಂದಿರ ಬಳಿಯ ಮಠಪತಿ ಗಲ್ಲಿಯಲ್ಲಿ ನಡೆದಿದೆ. ಅಶೋಕ್ ಗೋಡಣ್ಣನವರ್ (40), ಶಶಿಕಲಾ ಗೋಡಣ್ಣನವರ್ (30), ಚಂದ್ರಶೇಖರ್ ಗೋಡಣ್ಣನವರ್(20) ಮೃತ ದುರ್ದೈವಿಗಳು.
ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ನೆನೆದಿದ್ದ ಮೇಲ್ಛಾವಣಿ ಏಕಾಏಕಿ ಕುಸಿದ ಪರಿಣಾಮ ಮನೆಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಮೃತ ಸಂಬಂಧಿಕರ ಆಕ್ರಂದ ಮುಗಿಲು ಮುಟ್ಟಿತ್ತು.
ಘಟನೆಯಲ್ಲಿ ರಂಜಿತ್ ಗೋಡಣ್ಣನವರ್ (8) ಮತ್ತು ಅಜಿತ್ ಗೋಡಣ್ಣನವರ್ (3) ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಈ ಇಬ್ಬರು ಮಕ್ಕಳು ಪಕ್ಕದ ಕೋಣೆಯಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Patil  06

ಸಾವಿಗೀಡಾದ ಮೂರು ಜನರಿಗೂ ತಲಾ ನಾಲ್ಕು ಲಕ್ಷ ರೂ. ಪರಿಹಾರ ನೀಡುವುದಾಗಿ ತಹಶೀಲ್ದಾರ್ ಎಂ.ಎನ್.ಬಳಿಗಾರ್ ತಿಳಿಸಿದ್ದಾರೆ. ಘಟನೆ ಮಠಪತಿ ಗಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿಜಯಪುರ ತಹಶೀಲ್ದಾರ್‍ರವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಮೃತರ ಸಂಬಂಧಿಕರಿಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು. ಭಾರೀ ಮಳೆ ಬಿದ್ದ ಪರಿಣಾಮ ಮೇಲ್ಛಾವಣಿ ಹನಿಗೊಳಗಾಗಿದ್ದು, ಕುಸಿದು ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದರು.

Patil  04

Patil  03

Patil  02

Facebook Comments

Sri Raghav

Admin