ಸ್ಪೇನ್ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Spain-Terror

ಮ್ಯಾಡ್ರಿಡ್, ಆ.28 -ಸ್ಪೇನ್‍ನಲ್ಲಿ ಕಳೆದ ವಾರ ಭಯೋತ್ಪಾದಕರಿಂದ ನಡೆದ ಎರಡು ವಾಹನಗಳ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ. ವಾಹನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜರ್ಮನಿಯ ಪ್ರವಾಸಿ 51 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.  ಸ್ಪೇನ್‍ನ ಬಾರ್ಸಿಲೋನಾ ನಗರದ ಲಾಸ್ ರಾಂಬ್ಲಾನ್ ಮತ್ತು ಕ್ಯಾಂಬ್ರಿಲ್ಸ್‍ನ ವಿಹಾರಧಾಮದಲ್ಲಿ ಭಯೋತ್ಪಾದಕರು ವ್ಯಾನ್ ಮತ್ತು ಕಾರುಗಳನ್ನು ಜನರತ್ತ ರಭಸವಾಗಿ ನುಗ್ಗಿಸಿ ಹತ್ಯೆ ನಡೆಸಿದ್ದರು.

Facebook Comments

Sri Raghav

Admin