ಹಂದಿ ಜ್ವರಕ್ಕೆ ರಾಜಸ್ತಾನದ ಶಾಸಕಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

MLA--01

ಜೈಪುರ್, ಆ.28-ಮಾರಕ ಎಚ್1ಎನ್1 ಸೋಂಕಿಗೆ (ಹಂದಿ ಜ್ವರ) ರಾಜಸ್ತಾನದ ಶಾಸಕಿಯೊಬ್ಬರು ಬಲಿಯಾಗಿದ್ದಾರೆ. ಭಿಲ್ವಾರಾ ಜಿಲ್ಲೆಯ ಮಂಡಲ್‍ಗಢ್‍ನ ಬಿಜೆಪಿ ಶಾಸಕಿ ಕೀರ್ತಿ ಕುಮಾರಿ(50) ಇಂದು ಹಂದಿಜ್ವರದಿಂದ ಜೈಪುರ್‍ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಹಂದಿ ಜ್ವರದಿಂದ ಬಳಸುತ್ತಿದ್ದ ಅವರನ್ನು ಸರ್ಕಾರ ಒಡೆತನದ ಎಸ್‍ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೆ ಉಸಿರಾಟ ಸಮಸ್ಯೆಯಿಂದಾಗಿ ಪೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಕಾಂತ್ ಸ್ವಾಮಿ ತಿಳಿಸಿದ್ದಾರೆ.   ರಾಜಸ್ತಾನದ ಬಿಜೋಲಿಯಾ ರಾಜಮನೆತನಕ್ಕೆ ಸೇರಿದ ಕೀರ್ತಿ ಕುಮಾರಿ ಬಿಜೆಪಿಯಲ್ಲಿ ವಿವಿಧ ಹುದ್ದೆಗಳಲ್ಲೂ ಕಾರ್ಯನಿರ್ವಹಿಸಿದ್ದರು.

Facebook Comments

Sri Raghav

Admin