45ನೇ ಮುಖ್ಯ ನ್ಯಾಯಮೂರ್ತಿ ಆಗಿ ನ್ಯಾ.ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Deepak-Mishra--01

ನವದೆಹಲಿ, ಆ.28-ಹಿರಿಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು ಇಂದು ಭಾರತದ 45ನೇ ಮುಖ್ಯ ನ್ಯಾಯಮೂರ್ತಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜದಾನಿ ದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಮಿಶ್ರಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನಿನ್ನೆ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ನಿವೃತ್ತರಾದ ನಂತರ 64 ವರ್ಷಗಳ ನ್ಯಾ. ದೀಪಕ್ ಮಿಶ್ರಾ ಅಧಿಕಾರ ವಹಿಸಿಕೊಂಡಿದ್ದರು.

ನ್ಯಾ. ಮಿಶ್ರಾ ಅಕ್ಟೋಬರ್ 2, 2018ರವರೆಗೆ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಮುಂದುವರಿಯಲಿದ್ದಾರೆ. ಸಂಪ್ರದಾಯದಂತೆ ನ್ಯಾ. ಜೆ.ಎಸ್. ಖೇಹರ್ ಮುಂದಿನ ಸಿಐಜೆ ಆಗಿ ಮಿಶ್ರಾ ಅವರ ಹೆಸರನ್ನು ಸೂಚಿಸಿದ್ದರು.

Facebook Comments

Sri Raghav

Admin