ಅತ್ಯಾಚಾರಿ ಬಾಬಾಗೆ ಶಿಕ್ಷೆ ವಿಧಿಸಿದ ನ್ಯಾ. ಜಗದೀಪ್ ಸಿಂಗ್‍ಗೆ ಝಡ್+ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

Jagadeep-Singh

ಚಂಡೀಗಢ, ಆ.29-ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂ ಸಿಂಗ್‍ಗೆ 20 ವರ್ಷಗಳ ಸಜೆ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್‍ಗೆ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.  ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ನ್ಯಾಯಮೂರ್ತಿ ಅವರಿಗೆ ಈ ವಿಶೇಷ ಭದ್ರತೆ ನೀಡಲಾಗಿದ್ದು, 55 ಪೊಲೀಸರು ಹಾಗೂ 15 ಎನ್‍ಎಸ್‍ಜಿ ಕಮ್ಯಾಂಡೋ ರಕ್ಷಣೆ ನೀಡುತ್ತಿದ್ದಾರೆ. ನ್ಯಾ. ಜಗದೀಪ್ ಸಿಂಗ್ ಅವರ ಕುಟುಂಬದ ಸದಸ್ಯರಿಗೂ ಭದ್ರತೆ ಒದಗಿಸಲಾಗಿದೆ. ನಿನ್ನೆ ಸಂಜೆ 4 ಗಂಟೆಗೆ ನ್ಯಾಯಮೂರ್ತಿ ತೀರ್ಪು ನೀಡಿ ಅತ್ಯಾಚಾರಿ ಬಾಬಾನನ್ನು 20 ವರ್ಷಗಳ ಕಾಲ ಜೈಲಿಗೆ ಅಟ್ಟುವ ಮಹತ್ವದ ತೀರ್ಪು ಪ್ರಕಟಿಸಿದ್ದರು. ನಂತರ ಅವರಿಗೆ ಡೇರಾ ಬೆಂಬಲಿಗರೆಂದು ಹೇಳಿಕೊಂಡ ಕೆಲವರಿಂದ ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರ ಝಡ್+ ಭದ್ರತೆ ಒದಗಿಸಿದೆ.

Facebook Comments

Sri Raghav

Admin