ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ಬಾಂಬ್ ಸ್ಫೋಟ, 8 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kabul--01

ಕಾಬೂಲ್, ಆ.29-ಹಿಂಸಾಚಾರಪೀಡಿತ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಅತಿ ಭದ್ರತೆಯ ಅಮೆರಿಕ ರಾಯಭಾರಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ದಲ್ಲಿ 8 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿ ದ್ದಾರೆ.  ಕಾಬೂಲ್‍ನ ಮಸೌದ್ ಸ್ಕೇರ್ ಬಳಿ, ಅಮೆರಿಕ ಧೂತವಾಸ ಕಾರ್ಯಾಲಯದ ಬಳಿಯೇ ಈ ಸ್ಫೋಟ ನಡೆದಿದೆ ಎಂದು ಗೃಹ ಸಚಿವಾಲಯದ ವಕ್ತಾರ ನಜೀಬ್ ಡ್ಯಾನಿಶ್ ತಿಳಿಸಿದ್ದಾರೆ.

ಅಫ್ಘನ್‍ನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುತ್ತಿರುವ ತಾಲಿಬಾನ್ ಬಂಡುಕೋರರ ಕೃತ್ಯ ಇದೆಂದು ಶಂಕಿಸಲಾಗಿದೆ.  ಯುದ್ಧದಿಂದ ಜರ್ಝರಿತವಾಗಿರುವ ಆಫ್ಘಾನಿಸ್ತಾನ ದಿಂದ ಅಮೆರಿಕ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳು ವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ತಾಲಿಬಾನ್ ಉಗ್ರರು ಅಮೆರಿಕನ್ನರಿಗೆ ಆಫ್ಫನ್ ಮಸಣವಾಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದರು.

Facebook Comments

Sri Raghav

Admin