ಆ್ಯಂಬುಲೆನ್ಸ್’ನಲ್ಲೆ ಹೆರಿಗೆ ಮಾಡಿಸಿ ತಾಯಿ-ಮಗುವಿನ ಪ್ರಾಣ ಉಳಿಸಿದ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

108

ಚಿಂತಾಮಣಿ, ಆ.29- ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಸಾಧ್ಯವಿಲ್ಲ. ನೀವು ಕೋಲಾರಕ್ಕೆ ತೆರಳಿ ಎಂದು ವೈದ್ಯರು ನಿರಾಕರಿಸಿದ್ದ ಹೆರಿಗೆಯನ್ನು ಆ್ಯಂಬುಲೆನ್ಸ್ ಸಿಬ್ಬಂದಿ ಸರಾಗವಾಗಿ ಮಾಡುವ ಮೂಲಕ ತಾಯಿ-ಮಗುವಿನ ಪ್ರಾಣ ಉಳಿಸಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.
ಸಿದ್ದಪಲ್ಲಿ ವೆಂಕಟಲಕ್ಷ್ಮಮ್ಮ ಅವರು ಹೆರಿಗೆಗೆಂದು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಹೋಗಿದ್ದರು. ಸಾಮಾನ್ಯ ಹೆರಿಗೆ ಮಾಡಲು ಸಾಧ್ಯವಿಲ್ಲ. ನೀವು ಕೋಲಾರ ಆಸ್ಪತ್ರೆಗೆ ಹೋಗಬೇಕೆಂದು ಸೂಚಿಸಿ ವೈದ್ಯರು ಕೈತೊಳೆದುಕೊಂಡಿದ್ದರು.

ಏನೋ ಆಗಿದೆ ಎಂದು ಆತಂಕಗೊಂಡ ವೆಂಕಟಲಕ್ಷ್ಮಮ್ಮ ಕಡೆಯವರು ಅವರನ್ನು ಆ್ಯಂಬುಲೆನ್ಸ್‍ನಲ್ಲಿ ಕರೆದೊಯ್ದರು. ಮಾರ್ಗಮಧ್ಯದಲ್ಲಿ ಅವರಿಗೆ ಹೆರಿಗೆ ನೋವು ಹೆಚ್ಚಾಗಿದೆ. ಆ್ಯಂಬುಲೆನ್ಸ್ ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ. ಸಹಜವಾಗಿಯೇ ಹೆರಿಗೆಯಾಗಿದೆ. ಹೆಣ್ಣು ಮಗು, ತಾಯಿ ಆರೋಗ್ಯವಾಗಿದ್ದಾರೆ.
ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ವೈದ್ಯರ ವಿರುದ್ಧ ವೆಂಕಟಲಕ್ಷ್ಮಮ್ಮ ಕಡೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾಯಕರು, ಬಡವರು ಬಂದರೆ ವೈದ್ಯರು ಈ ರೀತಿ ವರ್ತಿಸುತ್ತಾರೆ. ವೆಂಕಟಲಕ್ಷ್ಮಮ್ಮನಿಗೆ ಇಲ್ಲೇ ಸಹಜವಾಗಿ ಹೆರಿಗೆಯಾಗುತ್ತಿತ್ತು. ಆದರೆ, ಆಗುವುದಿಲ್ಲ ಎಂದು ಹೇಳಿ ವೈದ್ಯರು ಕಳುಹಿಸಿದ್ದರು. ಆ್ಯಂಬುಲೆನ್ಸ್‍ನಲ್ಲಿ ಹೆರಿಗೆಯಾಗಿದೆ. ಯಾವುದೇ ತೊಂದರೆಯಾಗಿಲ್ಲ. ಇದಕ್ಕೆ ವೈದ್ಯರು ಏನು ಹೇಳುತ್ತಾರೆ ಎಂದು ವೆಂಕಟಲಕ್ಷ್ಮಮ್ಮ ಕಡೆಯವರು ಕಿಡಿಕಾರಿದ್ದಾರೆ.

Facebook Comments

Sri Raghav

Admin