ಈಶಾನ್ಯ ಪೊಲೀಸರ ಬಲೆಗೆ ಬಿದ್ದ 13 ಖದೀಮರು, ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

Beng-Crime--042

ಬೆಂಗಳೂರು, ಆ.29- ನಗರದಲ್ಲಿ ನಡೆದಿದ್ದ ಕೊಲೆ, ಮನೆಕಳವು, ವಾಹನಗಳ ಕಳ್ಳತನ, ಸುಲಿಗೆ, ಕನ್ನಗಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಈಶಾನ್ಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ 13ಮಂದಿಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಕಳವು, ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ಹಣ, ಆಭರಣ, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ರಮೇಶ(26), ಲಕ್ಷ್ಮೀಪತಿ(26), ರಾಮಾಂಜನಿ(22) ಮತ್ತು ಚಂದ್ರ (23) ಎಂಬುವರನ್ನು ಬಂಧಿಸಿರುವ ಪೊಲೀಸರು ಮೂರು ಲಕ್ಷ ರೂ. ಬೆಲೆ ಬಾಳುವ 100 ಗ್ರಾಂ ಚಿನ್ನದ ಆಭರಣಗಳು, 60ಸಾವಿರ ಬೆಲೆಯ ಹೀರೋಹೋಂಡ ಸ್ಪೆಂಡರ್ ಹಾಗೂ ಯಲಹಂಕ ಉಪನಗರದಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 60ಸಾವಿರ ಬೆಲೆಯ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಠಾಣೆ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದ ಗೋವಿಂದಯ್ಯ ಎಂಬುವರನ್ನು 2013ರಲ್ಲಿ ಕೊಲೆ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ.21ರಂದು ಯಲಹಂಕದ ಮಾರುತಿನಗರ, ಬೃಂದಾವನ ಅಪಾರ್ಟ್‍ಮೆಂಟ್ ಸಮೀಪದ ನಿವಾಸಿ ಬಾಬು ಎಂಬುವರ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Beng-Crime--041

ಅಮೃತಹಳ್ಳಿ ಠಾಣೆ:
ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ, ಹಲ್ಲೆ ಮಾಡಿ ಮೊಬೈಲ್‍ಗಳು ಹಾಗೂ ಹಣ ತೋಚುತ್ತಿದ್ದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ದಾಮ್ ಹುಸೇನ್(20), ಮೊಹಮ್ಮದ್ ಅಬ್ರಹಾರ್(19) ಮತ್ತು ಮಹಮ್ಮದ್ ಇಬ್ರಾಹಿಂ(21) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಮೂರು ಮೊಬೈಲ್ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಮೂರು ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

ಬಾಗಲೂರು ಠಾಣೆ:

ಮನೆಯೊಂದರ ಶೋಕೆಸ್‍ನಲ್ಲಿಟ್ಟಿದ್ದ ಒಂದು ಲಕ್ಷ ಹಣ ಕಳ್ಳತನ ಮಾಡಿದ್ದ ಪಶ್ಚಿಮಬಂಗಾಳ ಮೂಲದ ಮೈದುಲ್(27) ಎಂಬಾತನನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ದ್ವಾರಕಾನಗರದ ಮೂರನೇ ಮುಖ್ಯರಸ್ತೆ ನಿವಾಸಿ ಶಾಂತಿ ಎಂಬುವರ ಮನೆಯಲ್ಲಿ ಆ.18ರಂದು ಮಧ್ಯಾಹ್ನ 1ಗಂಟೆಯಲ್ಲಿ ಶೋಕೆಸ್‍ನಲ್ಲಿಟ್ಟಿದ್ದ ಒಂದು ಲಕ್ಷ ಹಣ ಕಳ್ಳತನವಾಗಿದ್ದ ಬಗ್ಗೆ ಬಾಗಲೂರು ಠಾಣೆ ಇನ್ಸ್‍ಪೆಕ್ಟರ್ ಅಂಜನ್‍ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಕಳ್ಳತನ ಮಾಡಿದ್ದ ಒಂದು ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಕೊಡುಗೆಹಳ್ಳಿ ಠಾಣೆ:

ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಬೆದರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐದು ಮಂದಿಯನ್ನು ಕೊಡುಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುನೀಲ್(23), ಸತೀಶ್(23), ರವಿ(23), ತೇಜು(25), ಮಾರುತಿ(24)ಬಂಧಿತ ದರೋಡೆಕೋರರಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಅಪ್ಪಿ(24) ಎಂಬಾತನ ಪತ್ತೆಗೆ ತನಿಖೆ ಮುಂದುವರೆದಿದೆ. ಗಿರೀಶ್ ಎಂಬುವರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ 2 ಮೊಬೈಲ್, ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

ಜು.24ರಂದು ರಾತ್ರಿ 9.30ರಲ್ಲಿ ಕೊಡುಗೆಹಳ್ಳಿ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ಗಿರೀಶ್ ಎಂಬುವರನ್ನು ಅಡ್ಡಗಟ್ಟಿ ಅವರಿಂದ 2500ರೂ. ಹಣ, 2 ಮೊಬೈಲ್ ದರೋಡೆ ಮಾಡಿದ್ದ ಬಗ್ಗೆ ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin