ಕಸದ ಸಮಸ್ಯೆ ನಿವಾರಣೆಗೆ ಮೇಯರ್ ಭಾರೀ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

Padmavathi-0002

ಬೆಂಗಳೂರು, ಆ.29- ನಗರದಲ್ಲಿ ಉಲ್ಬಣಿಸಿರುವ ಕಸದ ಸಮಸ್ಯೆ ನಿವಾರಣೆಗೆ ಮೇಯರ್ ಜಿ.ಪದ್ಮಾವತಿ ಅವರು ಕಸರತ್ತು ಆರಂಭಿಸಿದ್ದಾರೆ. ಕಸ ವಿಲೇವಾರಿ ಗುತ್ತಿಗೆದಾರರು ನಿನ್ನೆಯಿಂದ ಕೆಲಸಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಹೀಗಾಗಿ ಕಸವಿಲೇವಾರಿ ಗುತ್ತಿಗೆದಾರರಾದ ಬಾಲಸುಬ್ರಹ್ಮಣ್ಯಂ ಮತ್ತು ಗೋಪಿನಾಥರೆಡ್ಡಿ ಅವರೊಂದಿಗೆ ರಹಸ್ಯ ಸ್ಥಳದಲ್ಲಿ ಮೇಯರ್ ಪದ್ಮಾವತಿ ಮತ್ತು ಆಯುಕ್ತ ಮಂಜುನಾಥ್‍ಪ್ರಸಾದ್ ಅವರು ಮಾತುಕತೆ ನಡೆಸಿದ್ದಾರೆ. ನಿನ್ನೆ ಕೂಡ ಒಂದು ಸುತ್ತಿನ ಮಾತುಕತೆ ನಡೆಸಲಾಗಿತ್ತು.

ಆದರೆ ಇದು ಫಲ ನೀಡಿರಲಿಲ್ಲ. ಹೀಗಾಗಿ ಇಂದು ಕೂಡ ಮಾತುಕತೆ ಮುಂದುವರಿದಿದೆ.  ಕಾನೂನು ರೀತಿಯಲ್ಲಿ ಕಸವಿಲೇವಾರಿ ಗುತ್ತಿಗೆ ಕರೆಯಬೇಕು, ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಬೇಕು, ಬಿಬಿಎಂಪಿಯಿಂದ 200 ಕೋಟಿ ಸರ್ವೀಸ್ ಟ್ಯಾಕ್ಸ್ ಕಟ್ಟಬೇಕಿದೆ. ಹೊಸ ನಿಯಮದಿಂದ ಕಸವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನು ನಂಬಿರುವ ನೂರಾರು ಪೌರಕಾರ್ಮಿಕರ ಕುಟುಂಬ ಬೀದಿಗೆ ಬಿದ್ದಂತಾಗಿದೆ. ನಮ್ಮ ಬೇಡಿಕೆ ಈಡೇರುವವರೆಗೆ ಕೆಲಸ ಪ್ರಾರಂಭಿಸುವುದಿಲ್ಲ ಎಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ.

ಇತ್ತ ಇದನ್ನೇ ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದೆ. ಹಾಗಾಗಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರ್ಕಾರ ಸಮಸ್ಯೆ ಪರಿಹರಿಸುವಂತೆ ಮೇಯರ್ ಹಾಗೂ ಆಯುಕ್ತರಿಗೆ ತಾಕೀತು ಮಾಡಿದೆ. ಹಾಗಾಗಿ ಗುತ್ತಿಗೆದಾರರೊಂದಿಗೆ ಮೇಯರ್ ಮತ್ತು ಆಯುಕ್ತರು ಸಂಧಾನ ಸಭೆ ನಡೆಸುತ್ತಿದ್ದು, ಇದು ಯಶಸ್ವಿಯಾಗುವ ಲಕ್ಷಣ ಕಂಡುಬಂದಿದೆ. ಸಂಜೆ ವೇಳೆಗೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin