ಜಗನ್‍’ನನ್ನ ರೇಪಿಸ್ಟ್ ಬಾಬಾ ರಾಮ್ ರಹೀಮ್ ಗೆ ಹೋಲಿಸಿದ ಚಂದ್ರಬಾಬು ನಾಯ್ಡು..!

ಈ ಸುದ್ದಿಯನ್ನು ಶೇರ್ ಮಾಡಿ

Jaganmohan-Reddy

ಅಮರಾವತಿ, ಆ.29- ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪ್ರತಿಪಕ್ಷ ವೈಎಸ್‍ಆರ್‍ಎಸ್ ಕಾಂಗ್ರೆಸ್‍ನ ನಾಯಕ ಜಗನ್‍ಮೋಹನ್‍ರೆಡ್ಡಿಯನ್ನು ಗುರುಮಿತ್ ರಾಮ್ ರಹೀಮ್ ಸಿಂಗ್‍ಗೆ ಹೋಲಿಸಿದ್ದಾರೆ. ಹರಿಯಾಣದಲ್ಲಿ ಡೇರಾ ಸಚಾ ಸೌದಾದ ಗುರುಮಿತ್ ರಹೀಮ್‍ಸಿಂಗ್‍ರ ಆಂಧ್ರದಲ್ಲಿ ಜಗನ್‍ಬಾಬಾ. ಜಗನ್‍ಬಾಬಾದ್ದು ಕ್ರಿಮಿನಲ್ ಮನಸ್ಥಿತಿ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಡೇರಾ ಬಾಬಾ ಉತ್ತಮ ಸಂಘಟನೆಯ ನೇತೃತ್ವ ವಹಿಸಿದ್ದರು. ಆದರೆ, ಇದನ್ನು ದುರುಪಯೋಗಪಡಿಸಿಕೊಂಡು ತನ್ನ ಮೇಲಿನ ಮಹಿಳೆಯರ ನಂಬಿಕೆಗೆ ಭಂಗ ಉಂಟು ಮಾಡಿದರು. ಜೊತೆಗೆ ಬಾಬಾ ಉಗ್ರಗಾಮಿತ್ವವನ್ನು ಸೃಷ್ಟಿಸಿದರು ಮತ್ತು ಹಿಂಸೆಯನ್ನು ಹುಟ್ಟು ಹಾಕಿದರು. ಅವರು ಒಬ್ಬ ಸಾಧು ರೂಪದಲ್ಲಿ ಈ ದುಷ್ಕøತ್ಯ ನಡೆಸಿದರು. ನಮ್ಮಲ್ಲೂ ಅವರಂತಹ ವ್ಯಕ್ತಿ ಇದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಜಗನ್‍ವರ್ತನೆಯನ್ನು ನೋಡಿದರೆ ಗುರುಮಿತ್ ಬಾಬಾ ಎನ್ನಬೇಕಾಗುತ್ತದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಜಗನ್‍ನ ಅಸಭ್ಯ ನಡವಳಿಕೆ, ಇತರರನ್ನು ಬೆದರಿಸುವುದು, ಅಸೆಂಬ್ಲಿಯಲ್ಲಿ ಕಲಾಪಕ್ಕೆ ಅಡ್ಡಿ ಪಡಿಸುವುದು. ಇವೆಲ್ಲವೂ ಅವರ ವಿನಾಶಕಾರಿ ಮತ್ತು ಕ್ರಿಮಿನಲ್‍ಮನಸ್ಥಿತಿಯನ್ನು ಬಿಂಬಿಸುತ್ತವೆ ಎಂದು ಚಂದ್ರಬಾಬು ದೂರಿದ್ದಾರೆ.

Facebook Comments

Sri Raghav

Admin