ಜಗಳ ಮಾಡಿಕೊಂಡು ದೂರವಾದ ತಂದೆ-ತಾಯಿ, ಮನನೊಂದ ಮಗ ನೇಣಿಗೆ ಶರಣು..!

ಈ ಸುದ್ದಿಯನ್ನು ಶೇರ್ ಮಾಡಿ

Suicide--1

ಬೆಂಗಳೂರು, ಆ.29- ಅಪ್ಪ-ಅಮ್ಮ ಜಗಳ ಮಾಡಿಕೊಂಡು ಬೇರೆ ಬೇರೆಯಾಗಿದ್ದರಿಂದ ಖಿನ್ನತೆಗೊಳಗಾಗಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪಂಗಿ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಪಂಗಿ ರಾಮನಗರದ ವಿನಾಯಕ ಶಾಲೆಯಲ್ಲಿ 8ನೆ ತರಗತಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತನ ತಂದೆ-ತಾಯಿ ಜಗಳ ಮಾಡಿಕೊಂಡು ಬೇರೆ ಬೇರೆಯಾಗಿದ್ದರು. ಸಂಪಂಗಿ ರಾಮನಗರದಲ್ಲಿ ತಾಯಿಯೊಂದಿಗೆ ಪ್ರವೀಣ್ ವಾಸವಾಗಿದ್ದನು.

ಪೋಷಕರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿದ್ದರಿಂದ ಖಿನ್ನತೆಗೊಳಗಾಗಿದ್ದ ಪ್ರವೀಣ್ ಕೆಲ ದಿನಗಳಿಂದ ಯಾರೊಂದಿಗೂ ಸೇರದೆ ಒಂಟಿಯಾಗಿರಲು ಬಯಸುತ್ತಿದ್ದ ಎನ್ನಲಾಗಿದೆ. ಶಾಲೆಯಲ್ಲೂ ಸಹ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಹೇಳಲಾಗಿದ್ದು, ತಾಯಿ ಮನೆ ಕೆಲಸಕ್ಕೆ ತೆರಳಿದ್ದಾಗ ಈತ ನನಗೆ ತಂದೆ-ತಾಯಿ ಬಯ್ಯುತ್ತಿದ್ದರು ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲಸದಿಂದ ತಾಯಿ ಮನೆಗೆ ಬಂದಾಗಲೇ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸಂಪಂಗಿ ರಾಮನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin