ಜನರ ದಾರಿ ತಪ್ಪಿಸಲು ಬಿಜೆಪಿಯಿಂದ ‘ಯಾತ್ರೆ’ ಗಿಮಿಕ್ : ಸಿಎಂ ಟೀಕಾ ಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಮೈಸೂರು, ಆ.29- ಬಿಜೆಪಿಯವರು ನವಕರ್ನಾಟಕ ಯಾತ್ರೆ ಮಾಡಿದರೂ ರಾಜ್ಯದ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ವಿವಿಧ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರು ನಡೆಸು ತ್ತಿರುವ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇಂತಹ ಯಾತ್ರೆ ಕೈಗೊಳ್ಳುವ ಮೂಲಕ ಜನರ ಮನಸ್ಸು ಬದಲಾಯಿಸಬಹುದು ಅಂದುಕೊಂಡಿದ್ದರೆ ಅದು ಅಸಾಧ್ಯ ಎಂದರು.

ದಲಿತರನ್ನು ಕರೆದು ಮುಖ್ಯಮಂತ್ರಿಗಳು ಊಟ ಹಾಕಲಿ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ದಲಿತರು ಎಂದರೆ ಯಡಿಯುರಪ್ಪ ಅವರ ಪ್ರಕಾರ ಯಾರು ಎಂದು ಪ್ರಶ್ನಿಸಿದರು. ಯಡಿಯೂರಪ್ಪನವರು ಕರೆದು ಊಟ ಹಾಕಿದವರು ಮಾತ್ರ ದಲಿತರೇ. ಬೇರೆ ಯಾರೂ ದಲಿತರೇ ಇಲ್ಲವೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ನಾವು ಒಂದು ದಿನವಷ್ಟೆ ಅಲ್ಲ, ಸದಾ ದೀನದಲಿತರೊಂದಿಗೇ ಇರುತ್ತೇವೆ. ಅವರೊಂದಿಗೆ ಊಟವನ್ನೂ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.

ದಲಿತರನ್ನು ಕರೆದು ಊಟ ಹಾಕುವುದು ರಾಜಕೀಯ ಗಿಮಿಕ್ ಎಂದು ಟೀಕಿಸಿದ ಅವರು, ಮುಂದಿನ ಚುನಾವಣೆಗಾಗಿ ಯಡಿಯೂರಪ್ಪ ದಲಿತರನ್ನು ಮನೆಗೆ ಕರೆದು ಊಟ ಹಾಕುವ ಮೂಲಕ ಗಿಮಿಕ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.  ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ದಲಿತರಿಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರಮೋದಿಯವರು ಧರ್ಮದ ಹೆಸರಲ್ಲಿ ಅಹಿಂಸೆ ಸಹಿಸಲ್ಲ ಎಂದು ಹೇಳಿದ್ದಾರಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಮೋದಿ ಬಾಯಿಮಾತಿಗೆ ಹಾಗೆ ಹೇಳುತ್ತಾರೆ. ಆದರೆ, ಬಿಜೆಪಿಯ ಅಜೆಂಡಾವೇ ಕೋಮುವಾದ ಎಂದು ಟೀಕಿಸಿದರು.   ಮೈಸೂರು ಸೇರಿದಂತೆ ಇನ್ನೂ ಕೆಲವೆಡೆ ಇಂದಿರಾ ಕ್ಯಾಂಟಿನ್ ತೆರೆಯಲು ಚಿಂತಿಸಲಾಗಿದೆ. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿದ್ದು ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅತಿ ಶೀಘ್ರದಲ್ಲೇ ಕುಲಪತಿಗಳನ್ನು ನೇಮಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಚಿವ ಸಂಪುಟ ಶೀಘ್ರ ವಿಸ್ತರಣೆಯಾಗಲಿದೆ ಎಂದು ಹೇಳಿದರು. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕಾರಿನ ಮೂಲಕ ನಗರಕ್ಕೆ ಬಂದ ಮುಖ್ಯಮಂತ್ರಿಗಳು ಅರಮನೆ ಮುಂಭಾಗದಲ್ಲಿರುವ ರಾಜೇಂದ್ರ ವೃತ್ತದಲ್ಲಿ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಧೃವನಾರಾಯಣ್, ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ವೆಂಕಟೇಶ್, ಮೇಯರ್ ರವಿಕುಮಾರ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin