ಜಪಾನ್ ಮೇಲೆ ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗ : ಉದ್ವಿಗ್ನತೆ ಉಲ್ಬಣ

ಈ ಸುದ್ದಿಯನ್ನು ಶೇರ್ ಮಾಡಿ

Missile-Japan

ಸಿಯೋಲ್/ಟೋಕಿಯೊ, ಆ.29-ಕ್ಯಾತೆ ತೆಗೆಯುವುದರಲ್ಲಿ ಕುಖ್ಯಾತಿ ಪಡೆದಿರುವ ಉತ್ತರಕೊರಿಯಾ ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉದಯರವಿ ನಾಡು ಜಪಾನ್ ಮೇಲೆ ಖಂಡಾಂತರ ಕ್ಷಿಪಣಿ ಪ್ರಯೋಗಿಸಿ ಉದ್ಧಟತನ ಪ್ರದರ್ಶಿಸಿದೆ. ಉತ್ತರ ಕೊರಿಯಾ ಪ್ರಯೋಗಿಸಿದ ಕ್ಷಿಪಣಿಯು ಜಪಾನ್ ಉತ್ತರ ಭಾಗದಲ್ಲಿರುವ ಹೊಕ್ಕೈಡೋದ ಪೆಸಿಫಿಕ್ ಸಾಗರದಲ್ಲಿ ಇಳಿದಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ.   ಪದೇ ಪದೇ ಆಣ್ವಸ್ತ್ರಗಳನ್ನು ಪ್ರಯೋಗಿಸಿ ಆತಂಕ ಸೃಷ್ಟಿಸುತ್ತಿರುವ ಉತ್ತರ ಕೊರಿಯಾದ ಈ ತಗಾದೆಯಿಂದ ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಮತ್ತಷ್ಟು ಕೆರಳಿವೆ.

ಇತ್ತೀಚಿನ ವರ್ಷಗಳಲ್ಲಿ ಪಯೊಂಗ್‍ಯಾಂಗ್‍ನಿಂದ ನಡೆದ ಅತ್ಯಂತ ಗಂಭೀರ ಬೆದರಿಕೆ ಕ್ರಮ ಇದಾಗಿದ್ದು. ಉತ್ತರ ಕೊರಿಯಾ ಮೇಲೆ ಮತ್ತಷ್ಟು ಒತ್ತಡ ಹೇರಲು ಜಪಾನ್ ಪ್ರಧಾನಿ ಶಿನ್‍ಝೋ ಅಬೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ.  ಈ ಬೆಳವಣಿಗೆ ನಂತರ ಅಬೆ ಅವರು ಟ್ರಂಪ್ ಜೊತೆ ದೂರವಾಣಿಯಲ್ಲಿ 40 ನಿಮಿಷಗಳ ಕಾಲ ಚರ್ಚಿಸಿದರು. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಪಾನ್ ಪ್ರಧಾನಿ, ಈ ಬಗ್ಗೆ ಸಮಾಲೋಚಿಸಲು ನಾವು ಕೂಡಲೇ ವಿಶ್ವಸಂಸ್ಥೆಯ ತುರ್ತು ಸಭೆ ಕರೆಯುವ ಅಗತ್ಯವಿದೆ ಹಾಗೂ ಉತ್ತರ ಕೊರಿಯಾ ಮೇಲೆ ಮತ್ತಷ್ಟು ಒತ್ತಡ ಹೇರುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin