ಜೈಲಿನಲ್ಲಿ ಮಾಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಬಾಬಾ ‘ರೇಪ್’ ರಹೀಮ್ ಸಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim-Singh-Jail

ರೋಹ್ಟಕ್, ಆ.29-ನಿನ್ನೆ ಮೊನ್ನೆ ಸಾಮಾಟ್ರನಂತೆ ಮೈಮೇಲೆ ಅಮೂಲ್ಯ ವಜ್ರ-ವೈಢೂರ್ಯ ಖಚಿತ ಚಿನ್ನಾಭರಣಗಳು ಹಾಗೂ ವೈಭವೋಪೇತ ವಸ್ತ್ರಗಳನ್ನು ಧರಿಸಿ ಮೆರೆದಿದ್ದ ಬಾಬಾ ಇಂದು ಹರ್ಯಾಣದ ರೋಹ್ಟಕ್ ಜೈಲಿನಲ್ಲಿ ಬಿಳೆ ಅರಳೆ ಖಾದಿ ವಸ್ತ್ರ ಧರಿಸಿದ 8647 ಸಂಖ್ಯೆಯ ಸಾಮಾನ್ಯ ಕೈದಿ..! ಭಾರೀ ದು:ಖ ಮತ್ತು ಹತಾಶೆಯೊಂದ ಬಾಬಾ ಜೈಲಿನಲ್ಲಿ ಮೊದಲ ದಿನ ಕಳೆದ. ನಿನ್ನೆ ರಾತ್ರಿ ಆತನಿಗೆ ನೀಡಿದ ನಾಲ್ಕು ಒಣಗಿದ ರೊಟ್ಟಿಗಳಲ್ಲಿ ಅತ್ಯಾಚಾರಿ ಬಾಬಾ ತಿಂದದ್ದು ಅರ್ಧ ಮಾತ್ರ. ಡೇರಾ ಸಚ್ಚಾ ಸೌಧ ಆಶ್ರಮದಲ್ಲಿ ಬಾಬಾನಿಗೆ ಸಹಸ್ರಾರು ಅಭಿಮಾನಿಗಳು ಶುಷ್ಕಫಲಗಳ ನೈವೇದ್ಯ ಮಾಡುತ್ತಿದ್ದರು. ಮೃಷ್ಟಾನ ಭೋಜನ ಸೇವಿಸಿ ತುಪ್ಪದಲ್ಲೇ ಕೈತೊಳೆದು ರೇಷ್ಮೆಯ ಪಲ್ಲಂಗದ ಮೇಲೆ ಪವಡಿಸುತ್ತಿದ್ದ ಸುಖದ ಲೋಲುಪತೆಯಲ್ಲಿದ್ದ ಬಾಬಾನಿಗೆ ಜೈಲಿನಲ್ಲಿ ನಿನ್ನೆ ರಾತ್ರಿ ನಿದ್ರೆಯೇ ಬರಲಿಲ್ಲ. ಬಹು ಹೊತ್ತಿನ ತನಕ ಆತ ಚಿಂತಾಕ್ರಾಂತನಾಗಿಯೇ ಕುಳಿತಿದ್ದ.

ಜೈಲಿನ ನಿಯಮದಂತೆ ಎಲ್ಲ ಕೈದಿಗಳು ದಿನನಿತ್ಯದ ನೌಕರಿ ಮಾಡಬೇಕು. ಅದರಂತೆ ಈತನಿಗೂ ಅರ್ಜಿ ನೀಡಲಾಗಿತ್ತು. ತಾನು ತೋಟದ ಮಾಲಿ ಅಥವಾ ಜೈಲಿನ ಪುಟ್ಟ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುವುದಾಗಿ ಅರ್ಜಿ ಭರ್ತಿ ಮಾಡಿದ್ದಾನೆ. ಬಾಬಾನಿಗೆ ದಿನಕ್ಕೆ 40 ರೂ.ಗಳ ಕೂಲಿ ನಿಗದಿಗೊಳಿಸಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ತನ್ನ ಜನ್ಮದಿನವನ್ನು ವೈಭವೋಪೇತವಾಗಿ ಆಚರಿಸಿಕೊಂಡಿದ್ದ ಬಾಬಾನಿಗೆ ಹರ್ಯಾಣದ ಮಂತ್ರಿ ಮಹೋದಯರು ಮತ್ತು ಖ್ಯಾತ ಉದ್ಯಮಪತಿಗಳು ಲಕ್ಷಗಟ್ಟಲೆ ಹಣವನ್ನು ಗೌರವ ದೇಣಿಗೆ ರೂಪದಲ್ಲಿ ಸಂದಾಯ ಮಾಡಿದ್ದರು. ಈಗ ತಾನು ಮಾಡಿದ ತಪ್ಪಿಗೆ ಬಾಬಾ ಫಲ ಅನುಭವಿಸುತ್ತಿದ್ದಾನೆ. ಕಾಲಾಯ ತಸ್ಮೈ ನಮಃ

Facebook Comments

Sri Raghav

Admin