ಟೆಕ್ಸಾಸ್‍ನಲ್ಲಿ ಜಲ ಸಮಾಧಿಯಾಗುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Taxas--01

ಹೌಸ್ಟನ್, ಆ.29-ಹಾರ್ವೆ ಚಂಡ ಮಾರುತದಿಂದ ದ್ವೀಪದಂತಾಗಿರುವ ಅಮೆರಿಕದ ಟೆಕ್ಸಾಸ್‍ನ ಲೇಕ್ ಬ್ರಯಾನ್‍ನಲ್ಲಿ ಜಲಸಮಾಧಿಯಾಗುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.  ಟೆಕ್ಸಾಸ್‍ನ ಎ ಅಂಡ್ ಎಂ ವಿಶ್ವವಿದ್ಯಾಲಯದ 20ರ ವಯೋಮಾನದ ಶಾಲಿನಿ ಮತ್ತು ನಿಖಿಲ್ ಬಾಟಿಯಾ ಎಂಬ ವಿದ್ಯಾರ್ಥಿಗಳು ಅಪಾಯದ ಮುನ್ಸೂಚನೆ ಇದ್ದರೂ ಬ್ರಯಾನ್ ಪ್ರದೇಶದ ಕೊಳವೊಂದರಲ್ಲಿ ಈಜುತ್ತಿದ್ದಾಗ ನೀರು ಪಾಲಾಗುತ್ತಿದ್ದರು. ಅದೇ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಇವರಿಬ್ಬರನ್ನು ರಕ್ಷಿಸಿದ್ದಾರೆ. ಅವರನ್ನು ಸೇಂಟ್ ಜೋಸೆಫ್ ಹಾಸ್ಪಿಟಲ್‍ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಾರ್ವೆ ಚಂಡಮಾರುತದಿಂದ ಟೆಕ್ಸಾಸ್ ಮತ್ತು ಲೂಸಿಯಾನಾ ರಾಜ್ಯಗಳಲ್ಲಿ ಐವರು ಮೃತಪಟ್ಟು ಅನೇಕರು ಕಣ್ಮರೆಯಾಗಿದ್ದಾರೆ. ಈ ಪ್ರಾಂತ್ಯಗಳು ಜಲಾವೃತವಾಗಿದ್ದು, ಭಾರತೀಯರೂ ಸೇರಿದಂತೆ ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ರಕ್ಷಣೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

Facebook Comments

Sri Raghav

Admin