ದಕ್ಷಿಣ ಆಫ್ರಿಕಾದಲ್ಲಿ ಐವರು ನರಭಕ್ಷಕರ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

Man-Eaters--01

ಜೋಹಾನ್ಸ್‍ಬರ್ಗ್, ಆ.29-ದಕ್ಷಿಣ ಆಫ್ರಿಕಾದಲ್ಲಿ ನರಭಕ್ಷಣೆ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಐವರು ಕ್ರೂರಿಗಳನ್ನು ನಿನ್ನೆ ಕೋರ್ಟ್‍ಗೆ ಹಾಜರುಪಡಿಸಲಾಗಿದೆ. ಈ ಸಂದರ್ಭದಲ್ಲಿ ಉದ್ರಿಕ್ತ ಜನರು ನ್ಯಾಯಾಲಯದ ಹೊರಗೆ ಜಮಾಯಿಸಿ ಅತ್ಯುಗ್ರ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಕ್ವಜಲ್-ನಾಟಲ್ ಪ್ರಾಂತ್ಯದ ಎಸ್ಕೋರ್ಟ್ ಗ್ರಾಮದ ನಿವಾಸಿಗಳಾದ ಈ ನರ ಭಕ್ಷಕರನ್ನು ಒಂದು ವಾರದ ಹಿಂದೆ ಪೊಲೀಸರು ಬಂಧಿಸಿದರು. ಇವರಲ್ಲಿ ಒಬ್ಬ ಆಗಸ್ಟ್ 18ರಂದು ಮಾನವನ ಕೈ-ಕಾಲುಗಳಿದ್ದ ಚೀಲದೊಂದಿಗೆ ಪೊಲೀಸ್ ಠಾಣೆಗೆ ಬಂದನು.

ನನಗೆ ಮನುಷ್ಯರ ಮಾಂಸ ತಿಂದು ಬೇಜಾರಾಗಿದೆ ಎಂದು ಹೇಳಿಕೆ ನೀಡಿ ಶರಣಾದ. ಈತ ನೀಡಿದ ಮಾಹಿತಿ ಮೇರೆಗೆ ಇನ್ನೂ ನಾಲ್ವರು ಮ್ಯಾನ್ ಈಟರ್ ಕ್ರೂರಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.  ಇವರು ಎಷ್ಟು ಜನರನ್ನು ಕೊಂದು ತಿಂದಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿಯುತ್ತಿದ್ದು, ಮತ್ತಷ್ಟು ನರಭಕ್ಷಕರು ಸೆರೆಯಾಗುವ ಸಾಧ್ಯತೆ ಇದೆ.

Facebook Comments

Sri Raghav

Admin