ದಸರಾ ಆನೆಗಳಿಗೆ ಸಿಸಿಟಿವಿ ಕಣ್ಗಾವಲು

ಈ ಸುದ್ದಿಯನ್ನು ಶೇರ್ ಮಾಡಿ

S-Dasara-Elephants

ಮೈಸೂರು,ಆ.29- ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳ ಕಣ್ಗಾವಲಿಗಾಗಿ ಸಿಸಿಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅರ್ಜುನ ನೇತೃತ್ವದ ಆನೆಗಳ ತಂಡ ಮೈಸೂರು ದಸರಾ ಮಹೋತ್ಸವದಲ್ಲಿ ಕೇಂದ್ರ ಬಿಂದುವಾಗಿದೆ. ಈ ಹಿನ್ನೆಲೆಯಲ್ಲಿ ಆನೆಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ.

ಅರಮನೆಗೆ ಬರುವ ಸಾರ್ವಜನಿಕರು ಆನೆಗಳೊಂದಿಗೆ ಫೋಟೋ ತೆಗೆದುಕೊಳ್ಳವುದು, ಸೇಲ್ಫಿ ತೆಗೆದುಕೊಳ್ಳುವುದು ಮತ್ತು ಫೋಟೋ ತೆಗೆದುಕೊಳ್ಳು ಕೆಲವರು ಫ್ಯಾಶ್ ಕ್ಯಾಮೆರಾ ಬಳಸಿದರೆ ಅದರಿಂದ ಆನೆಗಳು ಉದ್ವೇಗಗೊಳ್ಳುವ ಸಾಧ್ಯತೆ ಇರುವುದರಿಂದ ಸಿಸಿ ಕ್ಯಾಮೇರಾಗಳನ್ನು ಅಳವಡಿಸಲಾಗಿದೆ.
ಅರ್ಜುನನ ಬಳಿ 2 ಸಿಸಿ ಕ್ಯಾಮೇರಾಗಳು ಆನೆಗಳಿಗೆ ಪೌಷ್ಠಿಕ ಆಹಾರ ತಯಾರಿಸುವ ಅಡುಗೆ ಮನೆ, ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟಿರುವ ಕೊಠಡಿ, ಉಳಿದ ಆನೆಗಳ ಚಲನವಲನಗಳ ಗಮನಿಸಲು 8 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸಿಸಿ ಕ್ಯಾಮೇರಾ ದೃಶ್ಯಗಳನ್ನು ನಿರಂತರವಾಗಿ ಗಮನಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಾರ್ವಜನಿಕರು ಆನೆಗಳ ಬಳಿ ತೆರಳಿ ಆನೆಗಳಿಗೆ ತೊಂದರೆ ನೀಡಿದರೆ, ಸಿಸಿಟಿವಿ ಮೂಲಕ ನೋಡಿ ಅಲ್ಲಿರುವ ಸಿಬ್ಬಂದಿಗಳಿಗೆ ತಿಳಿಸುವ ವ್ಯವಸ್ಥೆ ಮಾಡಲಾಗಿದೆ.

Facebook Comments

Sri Raghav

Admin