ದಿನಕ್ಕೊಂದು ಅಚ್ಚರಿ : ಪಾಂಡಾಗಳ ತ್ಯಾಜ್ಯದಿಂದ ಜೈವಿಕ ಅನಿಲ ಸೃಷ್ಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Umesh--01

ಇದನ್ನು ಪ್ರಕೃತಿ, ಪ್ರಾಣಿ ಮತ್ತು ವಿಜ್ಞಾನ ವಿಸ್ಮಯ ಎನ್ನಬಹುದು. ಬೆಲ್ಜಿಯಂ ಸಂಶೋಧಕರಿಗೆ ಜೈವಿಕ ಅನಿಲ ಸೃಷ್ಟಿಗಾಗಿ ಪಾಂಡಾಗಳ ತ್ಯಾಜ್ಯಗಳು ಸುಳಿಹು ನೀಡಿದ್ದು, ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆಯುತ್ತಿವೆ.  ಬೆಲ್ಜಿಯಂನ ಬ್ರುಗೆಲೆಟ್ಟೆಯಲ್ಲಿನ ಪೈರಿ ಡೈಜಾ ವೈಲ್ಡ್‍ಲೈಫ್ ಪಾರ್ಕ್‍ನಲ್ಲಿ ಪಾಂಡಾಗಳ ಇಕ್ಕೆ ತ್ಯಾಜ್ಯಗಳನ್ನು ವಿಜ್ಞಾನಿಗಳ ತಂಡವು ಸಂಗ್ರಹಿಸುತ್ತಿದೆ. ಈ ವನ್ಯಜೀವಿ ಉದ್ಯಾನವನದಲ್ಲಿರುವ ಆರು ವರ್ಷದ ಗಂಡು ಪಾಂಡಾ ಕ್ಸಿಂಗ್ ಹುಯಿ ಅಂದರೆ ಮಿನುಗುವ ನಕ್ಷತ್ರ ಮತ್ತು ಅದರ ಸಂಗಾತಿ ಹಾವೋ ಹಾವೋ ಅಂದರ ಕರುಣಾಮಯಿ ಈ ಎರಡು ಪಾಂಡಾಗಳಿಗೆ ವಿಜ್ಞಾನಿಗಳು ತಮ್ಮ ಇಕ್ಕೆಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಯಾವುದೇ ಗಮನವಿಲ್ಲ.

ಅಳಿವಿನ ಅಂಚಿನಲ್ಲಿರುವ ಪಾಂಡಾಗಳ ವಂಶವಾಹಿ ರಚನೆಯೇ ಬೆರಗು ಮೂಡಿಸುವಂಥದ್ದು, ಇದು ಉಭಯಭಕ್ಷಕ ಜೀವಿ. ಬಿದಿರಿನಂಥ ಅತಿ ಗಟ್ಟಿಯಾದ ಆಹಾರವನ್ನು ತಿಂದು ಜೀರ್ಣಿಸಿಕೊಳ್ಳುವ ವಿಸ್ಮಯ ಜೀರ್ಣಾಂಗ ವ್ಯವಸ್ಥೆಯನ್ನು ಈ ಮುಗ್ಧ ಪ್ರಾಣಿಗಳು ಅಳವಡಿಸಿಕೊಂಡಿವೆ ಎಂದು ಜೈವಿಕ ರಾಸಾಯನಿಕ ಮತ್ತು ಮೈಕ್ರೋಬಯೋಲಾಜಿ ತಂತ್ರಜ್ಞಾನ ವಿಭಾಗದ ಪ್ರೋಫೆಸರ್ ಕರ್ನೀಲ್ ರಬಾಯಿ ವಿಶ್ಲೇಷಣೆ ಮಾಡಿದ್ದಾರೆ.

ತುಂಬಾ ಗಟ್ಟಿಯಾದ ವಸ್ತುವನ್ನು ಜೀರ್ಣಿಸಿಕೊಳ್ಳು ವಷ್ಟು ಅವುಗಳ ಜೀರ್ಣಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ಅವು ಬಿದಿರಿನ ಕೆಲವು ಭಾಗಗಳನ್ನು ಮಾತ್ರ ತಿನ್ನುತ್ತವೆ. ಪಾಂಡಾಗಳಿಗೆ ಪ್ರತಿದಿನ 30 ಕಿಲೋಗ್ರಾಂ ಬಿದಿರನ್ನು ನೀಡಲಾಗುತ್ತದೆ. ಅವು ಸುಮಾರು 10 ಕೆಜಿ ಬಿದಿರನ್ನು ತಿನ್ನಬಹುದು. ಬಿದಿರಿನ ಕೆಲವು ಭಾಗವನ್ನು ಮಾತ್ರ ಅವು ಏಕೆ ತಿನ್ನುತ್ತವೆ ಹಾಗೂ ಉಳಿದ ಭಾಗವನ್ನು ಏಕೆ ತಿನ್ನುವುದಿಲ್ಲ ಎಂಬುದು ಅರ್ಥವಾಗದ ಸಂಗತಿ ಎಂದು ಅವರು ಹೇಳಿದ್ದಾರೆ.
ನಾವು ಪಾಂಡಾದ ತ್ಯಾಜ್ಯಗಳು ಮತ್ತು ಇಕ್ಕೆಗಳನ್ನು ತೆಗೆದುಕೊಳ್ಳಲು ಮುಖ್ಯ ಕಾರಣವೆಂದರೆ, ಅವುಗಳ ಕರುಳಿನಲ್ಲಿ ಸೂಕ್ಷ್ಮ ಜೀವಿಗಳಿದ್ದು, ಈ ಮೈಕ್ರೋಆರ್ಗನಿಸಂಗಳು ಎಂಥ ಕಠಿಣ ಆಹಾರವನ್ನು ಜೀರ್ಣಿಸಿಕೊಳ್ಳಲು ಪಾಂಡಾಗೆ ಸಹಕಾರಿಯಾಗುತ್ತವೆ. ಹೀಗಾಗಿ ನಾವು ಅವುಗಳ ಇಕ್ಕೆಗಳನ್ನು ಸಂಗ್ರಹಿಸಿದ್ದೇವೆ. ಇದನ್ನು ಸಂಶೋಧನೆಗೆ ಒಳಪಡಿಸಿ ಜೀರ್ಣಾಂಗ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಗಮನಿಸುತ್ತೇವೆ.

ಪಚನ ಕ್ರಿಯೆ ಹೇಗೆ ಕೆಲಸ ಮಾಡುತ್ತದೆ ಎಂಬುದು ನಮಗೆ ಒಮ್ಮೆ ತಿಳಿದು ಬಂದರೆ, ಇತರ ಜೈವಿಕ ಸಮೂಹದ ವಿಘಟನೆಗಳಿಗೆ ಇದನ್ನು ನಾವು ಬಳಸಬಹುದೆ ಎಂಬ ಬಗ್ಗೆ ನಾವು ಚಿಂತಿಸಬಹುದು. ಹೀಗಾಗಿ ನಾವು ಜೈವಿಕ ಇಂಧನಗಳು ಅಥವಾ ಜೈವಿಕ ರಾಸಾಯನಿಕಗಳನ್ನು ತಯಾರಿಸಲು ಬಳಸಬಹುದು. ಅಲ್ಲದೆ ಪಾಂಡಾಗಳು ಕೆಲವು ರೀತಿಯ ಬಿದಿರುಗಳನ್ನು ಮಾತ್ರ ತಿನ್ನುತ್ತವೆ ಹಾಗೂ ಅಂಥ ಬಿದಿರಿನ ಕೆಲವು ಭಾಗಗಳನ್ನು ಮಾತ್ರ ತಿನ್ನುತ್ತೇವೆ, ಉಳಿದ ಭಾಗವನ್ನು ಏಕೆ ತಿನ್ನುವುದಿಲ್ಲ ಎಂಬ ಬಗ್ಗೆ ಸಂಶೋಧನೆ ಮಾಡಲು ಸಹ ಇದು ನೆರವಾಗುತ್ತದೆ ಎಂದು ವಿವರಿಸಿದ್ದಾರೆ.

ಬೆಲ್ಜಿಯಂ ಸಂಶೋಧಕರು ಬೃಹತ್ ಪಾಂಡಾಗಳ ಇಕ್ಕೆಗಳನ್ನು ಈಗ ಗಂಭೀರವಾಗಿ ಪರಿಶೀಲಿಸುತ್ತಾ ಅಧ್ಯಯನ ನಡೆಸುತ್ತಿದ್ದಾರೆ. ಅತಿ ಗಟ್ಟಿಯಾದ ಬಿದಿರನ್ನು ತಿಂದು ಈ ಪ್ರಾಣಿಗಳು ಹೇಗೆ ಜೀರ್ಣಿಸಿಕೊಳ್ಳುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮೂಲಕ ಜೈವಿಕ ಇಂಧನದ ಹೊಸ ಪೀಳಿಗೆಯನ್ನು ಹೇಗೆ ಅಭಿವೃದ್ದಿಗೊಳಿಸಬಹುದು ಎಂಬ ಬಗ್ಗೆ ಸುಳಿವು ತಿಳಿಯುವ ಭರವಸೆಯಲ್ಲಿ ಇದ್ದಾರೆ.

Facebook Comments

Sri Raghav

Admin

One thought on “ದಿನಕ್ಕೊಂದು ಅಚ್ಚರಿ : ಪಾಂಡಾಗಳ ತ್ಯಾಜ್ಯದಿಂದ ಜೈವಿಕ ಅನಿಲ ಸೃಷ್ಟಿ..!

Comments are closed.