ದ್ವಿತಿಯ ಪಿಯುಸಿ ಫೇಲ್ ಆದವರು ಈ ಸುದ್ದಿಯನ್ನು ತಪ್ಪದೆ ಓದಿ..!

ಈ ಸುದ್ದಿಯನ್ನು ಶೇರ್ ಮಾಡಿ

PUC-Result--1

ಬೆಂಗಳೂರು, ಆ.29- ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತಿರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಇದೊಂದು ಎಚ್ಚರಿಕೆಯ ಕರೆಗಂಟೆ. ಉತ್ತಿರ್ಣರಾಗಲು 2018ರ ಪೂರಕ ಪರೀಕ್ಷೆಯೇ ಕೊನೇ ಅವಕಾಶವಾಗಿದೆ. ಹೌದು. ಒಂದು ವೇಳೆ ಆ ಪರೀಕ್ಷೆಯಲ್ಲೂ ಫೇಲಾದರೆ ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಇನ್ನೆಂದೂ ಚಾನ್ಸï ಸಿಗಲ್ಲ. ಹಳೇ ಪಠ್ಯಕ್ರಮದಲ್ಲಿ ಅನುತ್ತಿರ್ಣಗೊಂಡ ವಿದ್ಯಾರ್ಥಿಗಳಿಗೆ 2018ರ ಪೂರಕ ಪರೀಕ್ಷೆವರೆಗೆ ಮಾತ್ರ ಹಳೇ ಪಠ್ಯಕ್ರಮ ಅನುಸಾರ ಪರೀಕ್ಷೆ ಬರೆಯುವ ಅವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕಲ್ಪಿಸಿದೆ. ಈ ಸಂಬಂಧ ಸುತ್ತೊಲೆ ಕೂಡ ಹೊರಡಿಸಿದೆ.

ಪಿಸಿಎಂಬಿ ಹೊರತುಪಡಿಸಿ ಕಲಾ, ವಾಣಿಜ್ಯ, ಭಾಷೆ ಹಾಗೂ ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಹಳೇ ಪಠ್ಯಕ್ರಮದಲ್ಲಿ, 2018ರ ಮಾರ್ಚ್‍ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆ ಹಾಗೂ ಇದರಲ್ಲಿ ಅನುತ್ತಿರ್ಣರಾದರೆ ಅದೇ ವರ್ಷ ನಡೆಯುವ ಪೂರಕ ಪರೀಕ್ಷೆಯನ್ನು ಎದುರಿಸಬಹುದು. ಆದರೆ, ಪೂರಕ ಪರೀಕ್ಷೆಯೆ ಕೊನೆಯ ಅವಕಾಶವಾಗಲಿದ್ದು, ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಯಾವುದೇ ಕಾರಣಕ್ಕೂ ಮತ್ತೆ ವಿಸ್ತರಿಸಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಸುತ್ತೊಲೆಯಲ್ಲಿ ಸ್ಪಷ್ಟವಾಗಿ ಉಲ್ಲೆಖಿಸಿದೆ.

ಬದಲಾವಣೆ:

ವಿಜ್ಞಾನ ವಿಭಾಗದಲ್ಲಿ ಈ ಹಿಂದೆ ಇದ್ದ 90+10(ಪ್ರಾಯೊಗಿಕ ಪರೀಕ್ಷೆ ಅಂಕ) ವ್ಯವಸ್ಥೆಯನ್ನು ಬದಲಾವಣೆ ಮಾಡಿ 3 ವರ್ಷದ ಹಿಂದೆ 70+30 ಅಂಕಗಳ ಪಠ್ಯಕ್ರಮವ್ನನೇ ಜಾರಿಗೆ ತರಲಾಗಿದೆ. ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ತೆಗೆದುಕೊಂಡು ಅನುತ್ತಿರ್ಣರಾಗಿದ್ದ ವಿದ್ಯಾರ್ಥಿಗಳು 2018ನೇ ವಾರ್ಷಿಕ ಪರೀಕ್ಷೆಯಿಂದ ನೂತನ ಪಠ್ಯಕ್ರಮದಲ್ಲಿಯೆ ಪರೀಕ್ಷೆ ಬರೆಯಬೇಕಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಳೇ ಪಠ್ಯಕ್ರಮದಲ್ಲಿ ಅನುತ್ತಿರ್ಣಗೊಂಡಿರುವವರಿಗೆ 70 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗದ ಪ್ರಾಯೊಗಿಕ 10 ಅಂಕಗಳನ್ನು ಪರಿಗಣಿಸಿ, ಒಟ್ಟು 80 ಅಂಕಗಳನ್ನು 100 ಅಂಕಗಳಿಗೆ ಸರಾಸರಿ ಮಾಡಿ ಅಂತಿಮ ಫಲಿತಾಂಶ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಕೆ ಅವಕಾಶ:

2018ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವ ಖಾಸಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 20ರಿಂದ ಅವಕಾಶ ಕಲ್ಪಿಸಲಾಗಿದೆ. 2001ರ ಮಾ.31ಕ್ಕೆ ಮೊದಲು ಜನಿಸಿದವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಿರ್ಣರಾದ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಪರೀಕ್ಷೆ ತಗೆದುಕೊಳ್ಳುವ ಅಭ್ಯರ್ಥಿಗಳು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಇಲಾಖೆಯ ಒಎಂಆರ್ ಶೀಟ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ದಂಡವಿಲ್ಲದೆ ಅಕ್ಟೋಬರ್ 3ರವರೆಗೆ ಹಾಗೂ ದಂಡ ಸಹಿತ ಅ.16ರೊಳಗೆ ಅರ್ಜಿ ಸಲ್ಲಿಸಬಹುದು. ಎಸ್‍ಸಿ, ಎಸ್‍ಟಿ ವರ್ಗದವರು 1,392 ರೂ. ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 1,694 ರೂ. ಶುಲ್ಕ ನಿಗದಿಪಡಿಸಲಾಗಿದೆ.

Facebook Comments

Sri Raghav

Admin