ಭಾರೀ ಮಳೆಯಿಂದ ಮುಳುಗುತ್ತಿದೆ ಮುಂಬೈ

ಈ ಸುದ್ದಿಯನ್ನು ಶೇರ್ ಮಾಡಿ

Mumbai--01

ಮುಂಬೈ, ಆ.29 – ಭಾರೀ ಮಳೆಯಿಂದ ದೇಶದ ವಾಣಿಜ್ಯ ರಾಜಧಾನಿ ಮುಂಬೈ ತತ್ತರಿಸಿದೆ. ನಿನ್ನೆ ಸಂಜೆಯಿಂದ ಬಿರುಗಾಳಿಯೊಂದಿಗೆ ಭಾರಿ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನಗಳ ಸಂಚಾರ ವ್ಯತ್ಯಯಗೊಂಡಿದೆ. ವಾಯುಭಾರ ಕುಸಿತದಿಂದ ಪ್ರಬಲ ಮಾರುತಗಳು ಬೀಸುತ್ತಿವೆ. ಸಮುದ್ರದಲ್ಲಿ ದೈತ್ಯಾಕಾರದ ಅಲೆಗಳು ಕಾಣಿಸಿ ಕೊಂಡಿದ್ದು, ಸಂಜೆ ಇದರ ರೌದ್ರಾವತಾರ ಮತ್ತಷ್ಟು ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Mumabi--02

Mumabi--03

Mumbai--04

Mumbai--07

Facebook Comments

Sri Raghav

Admin