ಯುವಕನೊಬ್ಬನನ್ನು ಕೊಂದು, ರುಂಡ ಕೊಂಡೊಯ್ದ ದುಷ್ಕರ್ಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Hasasan--010

ಚನ್ನರಾಯಪಟ್ಟಣ,ಆ.29- ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ರುಂಡವನ್ನೇ ಕೊಂಡೊಯ್ದಿರುವ ಘಟನೆ ತಾಲೂಕಿನ ದಂಡಿಗಾನಹಳ್ಳಿ ಹೋಬಳಿಯ ಎ.ಕಾಳೇನಹಳ್ಳಿಯಲ್ಲಿ ನಡೆದಿದೆ. ಎ. ಕಾಳೇನಹಳ್ಳಿ ಗ್ರಾಮದ ನವೀನ್(27) ಎಂಬಾತನ ರುಂಡವನ್ನು ಕತ್ತರಿಸಿ ಕೊಲೆಗಡುಕರು ಕೊಂಡೊಯ್ದಿದ್ದಾರೆ. ಶ್ರೀನಾಥ್ ಎಂಬುವವರ ಕಬ್ಬಿನ ಗದ್ದೆಯಲ್ಲಿ ರುಂಡವಿಲ್ಲದ ಶವ ಪತ್ತೆಯಾಗಿದ್ದು, ಸ್ಥಳದಲ್ಲಿ ಕುಡುಗೋಲು , ಚಪ್ಪಲಿ ನವೀನ್‍ಗೆ ಸೇರಿದ ಬೈಕ್, ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಕೀಯ ಕಾರಣದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ನಿನ್ನೆ ಎಂದಿನಂತೆ ಬೈಕ್‍ನಲ್ಲಿ ನವೀನ್ ಗದ್ದೆಗೆ ತೆರಳಿದ್ದರು. 11 ಗಂಟೆಯಾದರೂ ತಿಂಡಿ ತಿನ್ನಲು ಮನೆಗೆ ಬಂದಿರಲಿಲ್ಲ. ಅವರ ಮೊಬೈಲ್‍ಗೆ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ. ಇದರಿಂದ ಅನುಮಾನಗೊಂಡ ತಾಯಿ ಮತ್ತು ಸ್ನೇಹಿತರು ಗದ್ದೆಯ ಬಳಿ ಹುಡುಕಿಕೊಂಡು ಬಂದಿದ್ದಾರೆ. ಆಗ ರುಂಡವಿಲ್ಲದ ನವೀನ್ ಶವ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಚನ್ನರಾಯಪಟ್ಟಣದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments

Sri Raghav

Admin