ರಾಹುಲ್‍ ಮದುವೆಯಾಗುವುದಾದರೆ ದಲಿತ ಹೆಣ್ಣು ಕೊಡಲು ನಾವು ಸಿದ್ದ

ಈ ಸುದ್ದಿಯನ್ನು ಶೇರ್ ಮಾಡಿ

Rahul

ಬೆಂಗಳೂರು, ಆ.29- :   ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಗೆ ಕರ್ನಾಟಕದಿಂದ ದಲಿತ ಹೆಣ್ಣುಮಗಳನ್ನು ಕೊಡಲು ಸಿದ್ಧರಿದ್ದೇವೆ. ವಿವಾಹವಾಗುವಂತೆ ರಾಜ್ಯ ನಾಯಕರು ಯುವರಾಜನ ಮನವೊ ಲಿಸುತ್ತಾರೆಯೇ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರು ದಲಿತ ಕುಟುಂಬದಹೆ ಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಲಿ ಎಂದು ಹೇಳುತ್ತಿದ್ದಾರೆ. ಮೊದಲು ನಿಮ್ಮ ನಾಯಕರಾದ ರಾಹುಲ್‍ಗಾಂಧಿಗೆ ದಲಿತ ಸಮುದಾಯದ ಹೆಣ್ಣು ಮಗಳನ್ನು ಮದುವೆ ಆಗಲು ಹೇಳಬೇಕು. ಕರ್ನಾಟಕದಿಂದ ದಲಿತ ಸಮುದಾಯದ ಹೆಣ್ಣು ಕೊಡಲು ಸಿದ್ಧ ಎಂದು ಘೋಷಿಸಿದರು. ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎಂಬಂತೆ ದಲಿತ ಸಮು ದಾಯದ ಬಗ್ಗೆ ಕಳಕಳಿ ಇದ್ದರೆ ಹಿಂದೆ ನಿಮ್ಮ ಮಕ್ಕಳಿಗೆ ಇದೇ ಸಮುದಾಯದಿಂದ ಏಕೆ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಳ್ಳಲಿಲ್ಲ ಎಂದು ಕಾರಜೋಳ ಪ್ರಶ್ನಿಸಿದರು.

Facebook Comments

Sri Raghav

Admin