ಶತಮಾನದ ಇತಿಹಾಸವಿರುವ ಶಾಲೆಯ ದುಃಸ್ಥಿತಿ ನೋಡಿ ಹೇಗಿದೆ..!

ಈ ಸುದ್ದಿಯನ್ನು ಶೇರ್ ಮಾಡಿ

School

ಅರಸೀಕೆರೆ, ಆ.29 – ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ವಾರ್ಷಿಕ ಆಯವ್ಯಯ ದಲ್ಲಿ ಸಾವಿರಾರು ಕೋಟಿ ರೂ. ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಈ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ವಾದ ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳು ಇಂದಿಗೂ ಮರೀಚಿಕೆಯಾಗಿ ರುವುದು ಬೇಸರದ ಸಂಗತಿಯಾಗಿದೆ. ಶತಮಾನದ ಇತಿಹಾಸವಿರುವ ತಾಲೂಕಿನ ದೊಡ್ಡಮೇಟಿ ಕುರ್ಕೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಈ ಅಪವಾದಕ್ಕೆ ಹೊರತಾಗಿಲ್ಲ. ಡಿ.ಎಂ.ಕುರ್ಕೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ವ್ಯಾಸಂಗ ಮಾಡಲು ನೂರಾರು ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಆದರೆ ಶಾಲೆಯ ಮೇಲ್ಛಾವಣಿ ಯಾವಾಗ ಕುಸಿದು ಬೀಳುತ್ತದೋ? ಎಂಬ ಭಯ ವಿದ್ಯಾರ್ಥಿಗಳಿಗಷ್ಟೆ ಅಲ್ಲ ಶಾಲೆಯ ಅಧ್ಯಾಪಕರ ವೃಂದಕ್ಕೂ ಸಹ ಕಾಡುತ್ತಿದ್ದು , ಭಯದ ನಡುವೆಯೇ ಪಾಠ ಪ್ರವಚನಗಳು ನಡೆಯುತ್ತಿವೆ.

ಬ್ರಿಟೀಷ್ ಕಾಲದಲ್ಲಿ ನಿರ್ಮಾಣವಾಗಿ ರುವ ಈ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ರಾಜಕೀಯ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆಲ್ಲ ಶಿಕ್ಷಣದ ಬೆಳಕು ನೀಡಿ ಉಜ್ವಲ ಭವಿಷ್ಯ ರೂಪಿಸಿದ ಶಾಲೆಯ ಕೊಠಡಿಗಳು ಮಾತ್ರ ಪ್ರಸ್ತುತ ಶಿಥಿಲಾವಸ್ಥೆ ತಲುಪಿದೆ. ಶಾಲೆಯ ದುರಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗದೇ ಇರುವುದು ಜತೆಗೆ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯ ಸಹಜವಾಗಿಯೇ ಗ್ರಾಮದ ಜನತೆಯ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ತಪ್ಪಿದ ಅನಾಹುತ:

ಕಳೆದ ಶನಿವಾರ ಶಾಲೆಯ ಮುಂಭಾಗದ ಮೇಲ್ಛಾವಣಿ ದಿಢೀರನೆ ಕುಸಿದಿದೆ. ಅದೃಷ್ಟವಶಾತ್ ಕೂದಲಳತೆಯ ದೂರದಲ್ಲೇ ವಿದ್ಯಾರ್ಥಿಗಳು ಆಟವಾಡುತ್ತಿದ್ದರಿಂದ ಸಂಭವಿಸ ಬಹುದಾಗಿದ್ದ ದುರಂತವೊಂದು ತಪ್ಪಿದೆ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಹ ಸ್ಥಿತಿ ಸದ್ಯ ನಿರ್ಮಾಣವಾಗಿದೆ.  ಖಾಸಗಿ ಶಾಲೆ ಮಂಡಳಿಗಳು ನೀಡುತ್ತಿ ರುವ ಸ್ಪರ್ಧೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದ್ದು, ಗ್ರಾಮೀಣ ಭಾಗದ ಕೆಲವೊಂದು ಶಾಲೆಗಳಲ್ಲಿ ಮೂರಂಕಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಡಿ.ಎಂ.ಕುರ್ಕೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದರಿಂದ ಎಂಟನೆ ತರಗತಿವರೆಗೆ ನಡೆಯುತ್ತಿದ್ದು, ಒಟ್ಟು 245 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ಇನ್ನಾದರೂ ಸಂಬಂಧಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಚುನಾಯಿತ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ದುರಸ್ತಿಗೆ ಮುಂದಾಗಬೇಕೆಂಬುವುದು ಪೋಷಕರ ಆಗ್ರಹವಾಗಿದೆ.

ನೂರಾರು ವರ್ಷ ಇತಿಹಾಸವಿರುವ ಶಾಲೆ ಈಗ ಶಿಥಿಲ ಅವಸ್ಥೆಯಲ್ಲಿದೆ. ಅಲ್ಲದೇ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಟ್ಟಡ ದುರಸ್ತಿ ಮಾಡಿಕೊಡುವಂತೆ ಹತ್ತಾರು ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದು, ಸರ್ಕಾರ ಕೇವಲ ಒಂದು ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನ ಏನಕ್ಕೂ ಸಾಲುವುದಿಲ್ಲ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ತಾಪಂ ಸದಸ್ಯ ಲೋಕೇಶ್ ಅಳಲು ತೋಡಿಕೊಂಡಿದ್ದಾರೆ.  ಡಿ.ಎಂ.ಕುರ್ಕೆ ಸರ್ಕಾರಿ ಮಾದರಿ ಹಿರಿಯ ಪ್ರಾಥ ಮಿಕ ಪಾಠಶಾಲೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲೆಯ ಅಭಿವೃದ್ಧಿಗೆ ಪೂರಕ ವಾಗುವಂತಹ ಅಗತ್ಯ ಕ್ರಮ ಗಳನ್ನು ತ್ವರಿತ ವಾಗಿ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೋಹನ್‍ಕುಮಾರ್ ತಿಳಿಸಿದ್ದಾರೆ.

Facebook Comments

Sri Raghav

Admin