ಶೀಘ್ರದಲ್ಲೇ ದಾಖಲೆಗಳೊಂದಿಗೆ ಸಿದ್ದರಾಮಯ್ಯನವರ ಬಣ್ಣ ಬಯಲು ಮಾಡ್ತಿನಿ : ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Siddaramaiah

ಬೆಂಗಳೂರು, ಆ.29-ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ನಡೆಸಿರುವ ಭ್ರಷ್ಟಾಚಾರದ ದಾಖಲೆಗಳನ್ನು ಸಂಗ್ರಹಿಸಿ ಶೀಘ್ರದಲ್ಲೇ ಸಾರ್ವಜನಿಕರ ಮುಂದೆ ಇಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಅರ್ಕಾವತಿ ಲೇಔಟ್ ಡಿ ನೋಟಿಫಿಕೇಷನ್, ಎಸಿಬಿ ದುರುಪಯೋಗ, ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಗಳು, ಸಚಿವರು ಹಾಗೂ ಶಾಸಕರ ಮನೆಗಳ ಮೇಲೆ ನಡೆದ ಐಟಿ ದಾಳಿ ಸೇರಿದಂತೆ ಹಲವು ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಶೀಘ್ರದಲ್ಲೇ ಚಾರ್ಜ್‍ಶೀಟ್ ಅನ್ನು (ದೋಷಾರೋಪಣಾ ಪಟ್ಟಿ) ಸಾರ್ವಜನಿಕರ ಮುಂದೆ ಇಡುವುದಾಗಿ ತಿಳಿಸಿದರು. ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ. ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರ ಮೇಲೆ ದೂರುಗಳು ದಾಖಲಾಗಿವೆ ಎಂದು ಹೇಳಿದರು.  ಎಸಿಬಿಯನ್ನು ದುರುಪಯೋಗಪಡಿ ಸಿಕೊಂಡು ತಮ್ಮ ಹಾಗೂ ಅವರ ಸಹೋದ್ಯೋಗಿಗಳ ಮೇಲೆ ದಾಖಲಾಗಿರುವ ದೂರುಗಳಿಗೆ ಕ್ಲೀನ್‍ಚಿಟ್ ನೀಡಲಾಗುತ್ತದೆ. ವಿರೋಧ ಪಕ್ಷಗಳ ನಾಯಕರ ಮೇಲೆ ದೂರು ದಾಖಲಾದ ಕೆಲವೇ ದಿನಗಳಲ್ಲಿ ಎಫ್‍ಐಆರ್ ದಾಖಲಾಗುತ್ತದೆ. ಇದು ಈ ಸರ್ಕಾರದ ಆಡಳಿತ ವೈಖರಿ ಎಂದು ಕುಹಕವಾಡಿದರು. ಎಷ್ಟೇ ದೂರುಗಳು ದಾಖಲಾದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕರ ಮನವೊಲಿಸಲಿ:

ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹದಾಯಿ ನದಿ ನೀರು ಯೋಜನೆ ಅನುಷ್ಠಾನಗೊಳಿಸಲು ಬಿಜೆಪಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ನಾವು ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿಗಳ ಮನವೊಲಿಸಲು ಸಿದ್ಧರಿದ್ದೇವೆ. ಅದೇ ರೀತಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರ ಮನವೊಲಿಸಲು ಮುಂದಾಗಬೇಕೆಂದು ಯಡಿಯೂರಪ್ಪ ಒತ್ತಾಯಿಸಿದರು. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರ ಮನವೊಲಿಸಿ ಒಪ್ಪಿಸಿದರೆ ಶೀಘ್ರದಲ್ಲಿ ನಾವೇ ದಿನಾಂಕ ನಿಗದಿಪಡಿಸಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ಸಿದ್ಧರಿದ್ದೇವೆ. ಅಲ್ಲಿನ ಕಾಂಗ್ರೆಸ್ ನಾಯಕರು ತಗಾದೆ ತೆಗೆಯುತ್ತಿರುವುದರಿಂದಲೇ ಯೋಜನೆ ಅನುಷ್ಠಾನವಾಗಲು ವಿಳಂಬ ವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಧಿಕರಣದ ಹೊರಭಾಗದಲ್ಲೇ ವಿವಾದ ಬಗೆಹರಿಯಲಿ ಎಂಬುದು ನಮ್ಮ ಆಶಯವಾಗಿದೆ. ಉತ್ತರ ಕರ್ನಾಟಕದ ಭಾಗಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಕೇವಲ 7.5 ಟಿಎಂಸಿ ನೀರು ಬೇಕಾಗುತ್ತದೆ. ಈಗಾಗಲೇ ನಾವು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಸಾಧ್ಯವಾದರೆ ಮತ್ತೊಮ್ಮೆ ಮಾತುಕತೆಗೂ ಸಿದ್ಧ ಎಂದು ಬಿಎಸ್‍ವೈ ಹೇಳಿದರು.

ಕೇಂದ್ರ ಸರ್ಕಾರ ಹಾಗೂ ನಾವು ಈ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆವು. ಆದರೆ ಅಲ್ಲಿನ ವಿರೋಧಪಕ್ಷಗಳು ಯೋಜನೆಗೆ ಅಡ್ಡಿಪಡಿಸುತ್ತಿವೆ. ಇದರಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ದೂರಿದ ಅವರು, ಮತ್ತೊಂದು ಬಾರಿ ನಿಯೋಗ ಕೊಂಡೊಯ್ದು ಯೋಜನೆ ಅನುಷ್ಠಾನಕ್ಕೆ ಯತ್ನಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ರಾಹುಲ್‍ಗೆ ದಲಿತ ಹೆಣ್ಣು ಕೊಡಲು ಸಿದ್ಧ :

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಗೆ ಕರ್ನಾಟಕದಿಂದ ದಲಿತ ಹೆಣ್ಣುಮಗಳನ್ನು ಕೊಡಲು ಸಿದ್ಧರಿದ್ದೇವೆ. ವಿವಾಹವಾಗುವಂತೆ ರಾಜ್ಯ ನಾಯಕರು ಯುವರಾಜನ ಮನವೊ ಲಿಸುತ್ತಾರೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರು ದಲಿತ ಕುಟುಂಬದಹೆ ಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಲಿ ಎಂದು ಹೇಳುತ್ತಿದ್ದಾರೆ. ಮೊದಲು ನಿಮ್ಮ ನಾಯಕರಾದ ರಾಹುಲ್‍ಗಾಂಧಿಗೆ ದಲಿತ ಸಮುದಾಯದ ಹೆಣ್ಣು ಮಗಳನ್ನು ಮದುವೆ ಆಗಲು ಹೇಳಬೇಕು. ಕರ್ನಾಟಕದಿಂದ ದಲಿತ ಸಮುದಾಯದ ಹೆಣ್ಣು ಕೊಡಲು ಸಿದ್ಧ ಎಂದು ಘೋಷಿಸಿದರು. ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎಂಬಂತೆ ದಲಿತ ಸಮು ದಾಯದ ಬಗ್ಗೆ ಕಳಕಳಿ ಇದ್ದರೆ ಹಿಂದೆ ನಿಮ್ಮ ಮಕ್ಕಳಿಗೆ ಇದೇ ಸಮುದಾಯದಿಂದ ಏಕೆ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಳ್ಳಲಿಲ್ಲ ಎಂದು ಕಾರಜೋಳ ಪ್ರಶ್ನಿಸಿದರು.

Facebook Comments

Sri Raghav

Admin