ಷಡಕ್ಷರಿ ಅವರಿಗೆ ಸಚಿವ ಸಂಪುಟ ಸೇರುವ ಭಾಗ್ಯ ಇದ್ದಂತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Shadakshari--01

ಬೆಂಗಳೂರು, ಆ.29-ಸಂಪುಟ ವಿಸ್ತರಣೆ ಸನ್ನಿಹಿತವಾಗಿದ್ದು, ಪರಮೇಶ್ವರ್ ಆಪ್ತ ಷಡಕ್ಷರಿ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಲಿಂಗಾಯತರ ಖೋಟಾದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಷಡಕ್ಷರಿ ಅವರಿಗೆ ಸಚಿವ ಸ್ಥಾನ ನೀಡದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ.
ಮಹದೇವಪ್ರಸಾದ್ ಅವರಿಂದ ತೆರವಾದ ಸಹಕಾರ ಖಾತೆ ಹೊಣೆಯನ್ನು ಷಡಕ್ಷರಿ ಅವರ ಹೆಗಲಿಗೆ ಎನ್ನುವ ಮಾತು ಜೋರಾಗಿತ್ತು. ಸಾಕಷ್ಟು ಸಚಿವರು, ಮುಖಂಡರು ಷಡಕ್ಷರಿಗೆ ಅವರಿಗೆ ಅಭಿನಂದನೆ ಕೂಡ ಹೇಳಿದ್ದರು.

ಆದರೆ ಇದೀಗ ಷಡಕ್ಷರಿ ಅವರಿಗೆ ಮಂತ್ರಿ ಭಾಗ್ಯ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಷಡಕ್ಷರಿ ಬದಲಿಗೆ ಗೀತಾ ಮಹದೇವಪ್ರಸಾದ್‍ಗೆ ಮಂತ್ರಿ ಸ್ಥಾನ ನೀಡಲು ಸಿದ್ದರಾಮಯ್ಯ ಸಿದ್ದತೆ ನಡೆಸಿದ್ದಾರೆ. ಮೈಸೂರು ಭಾಗದಲ್ಲಿ ತಮ್ಮ ಹಿಡಿತ ಬಲಪಡಿಸುವ ನಿಟ್ಟಿನಲ್ಲಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಆರ್.ಬಿ.ತಿಮ್ಮಾಪುರ್, ಎಚ್.ಎಂ.ರೇವಣ್ಣ, ಗೀತಾಮಹದೇವಪ್ರಸಾದ್ ಸಂಪುಟ ಸೇರಲಿದ್ದಾರೆ.

Facebook Comments

Sri Raghav

Admin