ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ನಂಜುಂಡಿ

ಈ ಸುದ್ದಿಯನ್ನು ಶೇರ್ ಮಾಡಿ

Nanjundi--01

ಕೋಲಾರ,ಆ.29-ರಾಜ್ಯ ಸರ್ಕಾರದ ಆಡಳಿತದಲ್ಲಿ 103 ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಕೊಡಬೇಕಿದೆ, ಆದರೆ ಹಿಂದುಳಿದ ವರ್ಗಗಳ ನಾಯಕರೆಂದು ಹೇಳಿಕೊಂಡು ಎಲ್ಲಾ ಸ್ಥಾನಗಳನ್ನೂ ಮುಖ್ಯಮಂತ್ರಿಗಳೇ ಅನುಭವಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಸಿದ್ದರಾಮಯ್ಯ ವಿರುದ್ದ ಟೀಕಾ ಪ್ರಹಾರ ನಡೆಸಿದರು. ನಗರದ ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ 9ನೇ ರಾಜ್ಯ ಮಟ್ಟದ  ವಿಶ್ವಕರ್ಮ ಜಯಂತೋತ್ಸವದ ಪೂರ್ವಭಾವಿ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರನ್ನು ಹಿಂದುಳಿದ ವರ್ಗಗಳ ನಾಯಕ ಅಂತಾರೆ, ಸಿದ್ರಾಮಯ್ಯನವರು ರಾಜಕೀಯದಿಂದ ಸಂಘಟನೆ ಕಟ್ಟಿದ್ರೆ, ನಾನು ರಾಜಕೀಯ ರಹಿತವಾಗಿ ಸಂಘಟನೆಯನ್ನು ಕಟ್ಟಿದ್ದೇನೆ, ಇದರಲ್ಲಿ ನಿಜವಾದ ನಾಯಕರು ಯಾರು ಎಂದು ಪ್ರಶ್ನಿಸಿದರು.

ತಾನು ಬಿಜೆಪಿಗೆ ಬಂದಿರುವುದರಿಂದ ವಿಶ್ವಕರ್ಮ ಸಮಾಜಕ್ಕೆ ಬಲ ಬಂದಿದೆ ಎಂದರು.ಇದೇ ಸೆ.17ಕ್ಕೆ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಅವರನ್ನು ಕರೆದು, ಅವರ ಮೂಲಕ ಜಯಂತಿಗೆ ಸಾರ್ವತ್ರಿಕ ರಜೆ ಘೋಷಿಸಲಾಗುವುದು ಹಾಗೂ ಮುಂದಿನ ವರ್ಷದಿಂದ 500 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದಾಗಿ ಅವರು ತಿಳಿಸಿದರು. ಮಾಜಿ ಶಾಸಕ ವೈ. ಸಂಪಂಗಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಮಹಾ ಸಭಾದ ಜಿಲ್ಲಾ ಅಧ್ಯಕ್ಷ ವಿಷ್ಣು ಮಾತನಾಡಿದರು.

ಇದೇ ವೇಳೆ ಜಿಲ್ಲೆಯ ವಿಶ್ವಕರ್ಮ ಸಮುದಾಯದ 100 ಮಂದಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಲ್ಪಿ ಸೋಮಶೇಖರಾಚಾರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ರಾಜ್ಯ ಕಾರ್ಯಾದ್ಯಕ್ಷೆ ಬಿ.ಎಸ್. ಸಿದ್ಧರಾಜಮ್ಮಣ್ಣಿ, ಕಲ್ಪನಾ, ಅಂಬಿಕಾ, ಗೋವಿಂದಮ್ಮ, ಗಾಯಿತ್ರಿ ಚಂದ್ರಶೇಖರ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರು ವಿಶ್ವಕರ್ಮ, ಉದ್ಯಮಿ ಎಸ್. ದೇಶಿಕಾಚಾರ್, ಪತ್ರಕರ್ತರಾಜು ಕಾರ್ಯ, ಮುಖಂಡರಾದ ಎಸ್. ಲೋಕನಾಥ್, ಕೃಷ್ಣಾಚಾರ್‍ಉಪಸ್ಥಿತರಿದ್ದರು.

Facebook Comments

Sri Raghav

Admin