ಹಳಿ ತಪ್ಪಿದ ಡುರಾಂಟೊ ಎಕ್ಸ್ ಪ್ರೆಸ್‍ ರೈಲಿನ 9 ಬೋಗಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Duronto-Express--01

ಮುಂಬೈ, ಆ.29- ಉತ್ತರ ಪ್ರದೇಶದಲ್ಲಿ ಉತ್ಕಲ್ ರೈಲು ಹಳಿ ತಪ್ಪಿ 23 ಮಂದಿ ಮೃತಪಟ್ಟ ದುರಂತ ನೆನಪಿನಲ್ಲಿರುವಾಗಲೇ ಮಹಾರಾಷ್ಟ್ರದ ಅಸನ್‍ಗಾಂವ್‍ನಲ್ಲಿ ಇಂದು ಮುಂಜಾನೆ ನಾಗ್ಪುರ-ಮುಂಬೈ ಡುರಾಂಟೊ ಎಕ್ಸ್ ಪ್ರೆಸ್‍ನ 9 ಬೋಗಿಗಳು ಹಳಿ ತಪ್ಪಿದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತವಾಗಿಲ್ಲ.ಪ್ರತ್ಯಕ್ಷದರ್ಶಿಗಳ ಪ್ರಕಾರ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಅಸನ್‍ಗಾಂವ್ ರೈಲ್ವೆ ನಿಲ್ದಾಣದ ಬಳಿ ಬೆಳಗ್ಗೆ 6.35ರಲ್ಲಿ ಈ ಘಟನೆ ಸಂಭವಿಸಿತು. ಆರು ಬೋಗಿಗಳು ಹಳಿ ತಪ್ಪಿದವು ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ಉದಾಸಿ ತಿಳಿಸಿದ್ದಾರೆ.

Duronto-Express--02

ಅಪಘಾತ ಪರಿಹಾರ ರೈಲಿನೊಂದಿಗೆ ಎಂಜಿನಿಯರ್‍ಗಳು ಮತ್ತು ರಕ್ಷಣಾ ತಂಡ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಕೈಗೊಂಡವು. ರೈಲು ಹಳಿ ತಪ್ಪಿದ ಕಾರಣ ಈ ಮಾರ್ಗದ ಕೆಲವು ರೈಲುಗಳ ಸಂಚಾರಕ್ಕೆ ಅಡಚಣೆಯಾಯಿತು. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಜೀವ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಸೆಂಟ್ರಲ್ ರೈಲ್ವೆ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದ್ದಾರೆ. ಕಳೆದ 10 ದಿನಗಳ ಅವಧಿಯಲ್ಲಿ ರೈಲು ಹಳಿ ತಪ್ಪಿದ ಮೂರನೇ ಘಟನೆ ಇದಾಗಿದೆ. ಉತ್ತರಪ್ರದೇಶದ ಮುಝಫರ್‍ನಗರ್ ಜಿಲ್ಲೆಯಲ್ಲಿ ಆಗಸ್ಟ್ 19ರಂದು ಉತ್ಕಲ್ ಎಕ್ಸ್‍ಪ್ರೆಸ್‍ನ 14 ಬೋಗಿಗಳು ಹಳಿ ತಪ್ಪಿ 23 ಮಂದಿ ಮೃತಪಟ್ಟು 60 ಪ್ರಯಾಣಿಕರು ಗಾಯಗೊಂಡಿದ್ದರು. ಆಗಸ್ಟ್ 25ರಂದು ಮುಂಬೈನಲ್ಲಿ ಅಂಧೇರಿಗೆ ತೆರಳುತ್ತಿದ್ದ ಸ್ಥಳೀಯ ರೈಲಿನ ಆರು ಬೋಗಿಗಳು ಹಳಿ ತಪ್ಪಿ ಕೆಲವರಿಗೆ ಗಾಯಗಳಾಗಿದ್ದವು.

Duronto-Express--03

Duronto-Express--06

Facebook Comments

Sri Raghav

Admin