ಹಿಂಸಾಚಾರ ಪೀಡಿತ ಸಿರ್ಸಾದಲ್ಲಿ 12 ತಾಸು ಕಫ್ರ್ಯೂ ಸಡಿಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

curfew

ಸಿರ್ಸಾ, ಆ.29-ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‍ಗೆ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷಗಳ ಶಿಕ್ಷೆ ವಿಧಿಸಿದ ಬಳಿಕ, ಹಿಂಸಾಚಾರ ಪೀಡಿತ ಹರ್ಯಾಣದ ಸಿರ್ಸಾದಲ್ಲಿ ಇಂದು ಬೆಳಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ 12 ತಾಸುಗಳ ಕಾಲ ಕಫ್ರ್ಯೂ ಸಡಿಲಿಸಲಾಗಿದೆ.  ಈ ಪ್ರದೇಶದಲ್ಲಿ ಯಾವುದೇ ಹಿಂಸಾಚಾರ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು 12 ಗಂಟೆಗಳ ಕಾಲ ಕಫ್ರ್ಯೂ ಸಡಿಲಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಿದ್ದಾರೆ.

ಈ ಪ್ರದೇಶದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ಕಫ್ರ್ಯೂವನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆಯುವುದಾಗಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಅತ್ಯಾಚಾರಿ ಬಾಬಾನ ಧಾರ್ಮಿಕ ಕೇಂದ್ರ ಇರುವ ಸ್ಥಳವಾದ ಸಿರ್ಸಾದಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ಇದ್ದರೂ ಪರಿಸ್ಥಿತಿ ತಹಬಂದಿಯಲ್ಲಿದೆ.

Facebook Comments

Sri Raghav

Admin