ಹುಚ್ಚನಹಳ್ಳಿ ಬಳಿ ಪೊಲೀಸರು-ಪ್ರತಿಭಟನಕಾರರ ಘರ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Tipaturu--01

ತಿಪಟೂರು, ಆ.29- ಹೇಮಾವತಿ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಪೊಲೀಸರು ಘರ್ಷಣೆ ನಡೆಸಿದ ಘಟನೆ ತಿಪಟೂರು ತಾಲೂಕಿನ ಹುಚ್ಚನಹಳ್ಳಿ ಬಳಿ ನಡೆದಿದೆ. ಹೇಮಾವತಿ ಮುಖ್ಯನಾಲೆ ಯಿಂದ ಕೆರೆಗಳಿಗೆ ಹೋಗುವ ನೀರಿನ ತೂಬನ್ನು ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳು ಮುಚ್ಚಿಹಾಕಿದ್ದರು. ಇದರಿಂದ ಬೆಳೆಗಳಿಗೆ ನೀರು ಸಿಗದಂತಾಗಿತ್ತು. ಈ ವಿಚಾರವಾಗಿ ರೈತರು ಇಲಾಖೆ ಅಧಿಕಾರಿಗಳ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮುಂದಾದಾಗ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು ಪರಸ್ಪರ ತಳ್ಳಾಟ-ನೂಕಾಟ ನಡೆದಿದ್ದು, ಸ್ಥಳದಲ್ಲೇ ಇದ್ದ ಸಾರ್ವಜನಿಕರು ಹಾಗೂ ಇತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Facebook Comments

Sri Raghav

Admin