ಹೊಳೆನರಸಿಪುರ ಕಾಂಗ್ರೆಸ್ ಸಭೆಯಲ್ಲಿ ಸಚಿವರ ಎದುರೇ ಕಾರ್ಯಕರ್ತರ ಮಾರಾಮಾರಿ

ಈ ಸುದ್ದಿಯನ್ನು ಶೇರ್ ಮಾಡಿ

manju

ಹೊಳೆನರಸಿಪುರ,ಆ.29- ಇಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಕೆಪಿಸಿಸಿ ವೀಕ್ಷಕರ ಎದುರೇ ಎರಡು ಗುಂಪುಗಳ ನುಡವೆ ಕೈಕೈಮಿಲಾಯಿಸಿರುವ ಘಟನೆ ನಡೆದಿದೆ. ಇಂದು ಮದ್ಯಾಹ್ನ ಇಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಕರೆಯಲಾಗಿತ್ತು. ಈ ವೇಳೆ ಸಚಿವ ಎ.ಮಂಜು ಅವರು ಮಾತನಾಡುವಾಗ ಕೆಲವರು ಅಡ್ಡಿಪಡಿಸಿ ಸ್ಥಳೀಯರಿಗೆ ಸೂಕ್ತ ಪ್ರಾತಿನಿಧ್ಯ ಗೌರವ ಸಿಗುತ್ತಿಲ್ಲ. ನೀವು ಜಿಲ್ಲಾ ಉಸ್ತುವಾರಿಯಾಗಿ ನಿಷ್ಠವಂತ ಕಾರ್ಯಕರ್ತರು ಕಡೆಗಣಿಸುತ್ತಿದ್ದಾ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಯಾಗಿ ಮಂಜು ಅವರು ಕೂಡ ವಾಗ್ದಾಳಿ ನಡೆಸಿ ಪಕ್ಷದಲ್ಲಿ ಕಡೆಗಣಿಸಿ ಕೆಲವರು ಇಲ್ಲಸಲ್ಲದ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುಖಂಡ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪರ-ವಿರೋಧ ಘೋಷಣೆ ಕೂಗಿ ಪರಸ್ಪರ ಕೈಕೈಮಿಲಾಯಿಸಿ ಮಾರಾಮಾರಿ ನಡೆಯಿತು.

Facebook Comments

Sri Raghav

Admin