84 ರೋಗಿಗಳನ್ನು ಕೊಂದ ಕಿಲ್ಲರ್ ನರ್ಸ್ ಈತ ..!

ಈ ಸುದ್ದಿಯನ್ನು ಶೇರ್ ಮಾಡಿ

Nurse

ಬರ್ಲಿನ್, ಆ.29-ಜರ್ಮನಿಯಲ್ಲಿ ಪುರುಷ ನರ್ಸ್ ಒಬ್ಬ 84 ರೋಗಿಗಳನ್ನು ಕೊಂದಿರುವ ಆರೋಪಕ್ಕೆ ಗುರಿಯಾಗಿದ್ದು ಈ ಬಗ್ಗೆ ತನಿಖೆ ತೀವ್ರಗೊಂಡಿದೆ. ಡೆಲ್ಮನ್‍ಹೋಸ್ರ್ಟ್ ಪಟ್ಟಣದ ಕ್ಲಿನಿಕ್ ಒಂದರ ನರ್ಸ್ ನೀಲ್ಸ್ ಹೋಜಲ್ ಅಧಿಕ ಪ್ರಮಾಣದಲ್ಲಿ ಔಷಧಿಗಳನ್ನು ನೀಡಿ ಹೃದ್ರೋಗಿಗಳನ್ನು ಕೊಂದ ಆರೋಪ ಎದುರಿಸುತ್ತಿದ್ದಾನೆ. ಈತ ಎರಡು ಕೊಲೆ ಮತ್ತು ಇನ್ನೆರಡು ಹತ್ಯೆ ಯತ್ನಗಳನ್ನು ನಡೆಸಿರುವುದು 2015ರಲ್ಲಿ ಸಾಬೀತಾಗಿತ್ತು.

ಪೊಲೀಸರು ಮತ್ತು ವಿಚಾರಣಾಧಿಕಾರಿಗಳ ಪ್ರಕಾರ ಈತ 84 ಮಂದಿಯನ್ನು ಕೊಂದಿದ್ದಾನೆ. ಈತ ಬಂಧಿತನಾಗಿ ವಿಚಾರಣೆಗೆ ಒಳಪಟ್ಟ ನಂತರ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿಂದೆ ಈತ 43 ರೋಗಿಗಳನ್ನು ಹತ್ಯೆ ಮಾಡಿದ್ದಾನೆ ಎಂದು ನಂಬಲಾಗುತ್ತು. ಆದರೆ ಈತ ಮತ್ತಷ್ಟು ಕಗ್ಗೊಲೆಗಳನ್ನು ಮಾಡಿರುವ ಬಗ್ಗೆ ಪುರಾವೆಗಳು ಲಭಿಸುತ್ತಿವೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.  ಡೆಲ್ಮನ್‍ಹೋಸ್ರ್ಟ್ ಮತ್ತು ಓಲ್ಡ್‍ಬರ್ಗ್‍ನಲ್ಲಿ ಹಳೆ ರೋಗಿಗಳ ಮೃತದೇಹಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈತ ಕೆಲವು ಶವಗಳನ್ನು ಸುಟ್ಟಿದ್ದು, ಸಾಕ್ಷ್ಯಾಧಾರಗಳು ಲಭಿಸುವುದು ತನಿಖೆಗೆ ಅಡ್ಡಿಯಾಗಿದೆ.

Facebook Comments

Sri Raghav

Admin