ಅಜೇಯ ದಾಖಲೆ ನಿರ್ಮಿಸಲು ಧೋನಿ ಕಾತರ

ಈ ಸುದ್ದಿಯನ್ನು ಶೇರ್ ಮಾಡಿ

Dhoni

ಕೊಲಂಬೊ, ಆ.30- ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್ ವೈಭವದಿಂದ ಭಾರತ ತಂಡವನ್ನು ಜಯದ ಲಯದಲ್ಲಿ ತೇಲುವಂತೆ ಮಾಡಿರುವ ಮಹೇಂದ್ರ ಸಿಂಗ್ ಧೋನಿ ಅವರು ಅಜೇಯ (ನಾಟೌಟ್) ಸಾಧನೆ ಮಾಡಲು ಕಾತರದಿಂದಿದ್ದಾರೆ. ಮಹೇಂದ್ರ ಸಿಂಗ್ ಧೋನಿಯವರ ಕ್ರಿಕೆಟ್ ಜೀವನದಲ್ಲಿ ನಾಳಿನ ಪಂದ್ಯವು ಅನೇಕ ಕಾರಣಗಳಿಂದ ಮಹತ್ವವನ್ನು ಪಡೆದುಕೊಂಡಿದ್ದಾರೆ.ಮಹಿ ಇದುವರೆಗೂ 299 ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ಪ್ರತಿನಿಧಿಯಾಗಿದ್ದು ನಾಳೆ ತಮ್ಮ ವೃತ್ತಿ ಜೀವನದ 300ನೆ ಪಂದ್ಯವನ್ನು ಆಡಲು ಕಾತರದಿಂದಿದ್ದಾರೆ. ಅಲ್ಲದೆ ನಾಳೆಯ ಪಂದ್ಯದಲ್ಲಿ 1 ಸ್ಟಂಪಿಂಗ್ ಮಾಡಿದರೆ 100 ಸ್ಟಂಪಿಂಗ್ ಮಾಡಿದ ಕೀರ್ತಿಗೆ ಮಹಿ ಪಾತ್ರರಾಗುತ್ತಾರೆ. ಈಗಾಗಲೇ 99 ಸ್ಟಂಪಿಂಗ್ ಮಾಡಿರುವ ಮಹೇಂದ್ರ ಸಿಂಗ್ ಧೋನಿ ಲಂಕಾದ ಕುಮಾರಸಾಂಗಾಕಾರರೊಂದಿಗೆ ಸಮಬಲ ತೋರಿದ್ದಾರೆ.

ಇದೇ ಅಲ್ಲದೆ ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ಬಾರಿ ಅಜೇಯರಾಗಿ ಉಳಿಯುವ ದಾಖಲೆಯನ್ನು ಬರೆಯಲು ನಾಳೆಯ ಪಂದ್ಯದಲ್ಲಿ ಧೋನಿ ಅಜೇಯರಾಗಿ ಉಳಿಯಬೇಕು. ಶ್ರೀಲಂಕಾದ ಚಾಮಿಂಡಾ ವಾಸ್ ಹಾಗೂ ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಅವರು ಇದುವರೆಗೂ 72 ಪಂದ್ಯಗಳಲ್ಲಿ ಅಜೇಯರಾಗಿ ಉಳಿದು ಜಂಟಿ ದಾಖಲೆಯನ್ನು ನಿರ್ಮಿಸಿದ್ದಾರೆ. ನಾಳೆಯ ಪಂದ್ಯದಲ್ಲಿ ಧೋನಿ ಅಜೇಯರಾಗಿ ಉಳಿದರೆ, 73 ಪಂದ್ಯಗಳಲ್ಲಿ ನಾಟೌಟ್ ಆಗುವ ಮೂಲಕ ನೂತನ ದಾಖಲೆಯನ್ನು ಮಹಿ ಬರೆಯಲಿದ್ದಾರೆ.

2019ರಲ್ಲಿ ನಡೆಯುವ ವಿಶ್ವಕಪ್‍ನಲ್ಲಿ ಸ್ಥಾನವನ್ನು ಉಳಿಸಿಕೊಳ್ಳಬೇಕಿದ್ದರೆ ಶ್ರೀಲಂಕಾ ವಿರುದ್ಧದ ಸರಣಿಯ ಅಗ್ನಿಪರೀಕ್ಷೆಯಲ್ಲಿ ಮಹಿ ಪಾಸ್ ಆಗಬೇಕಿತ್ತು ಆ ಕಾರ್ಯವನ್ನು ಸಮರ್ಥವಾಗಿ ಎದುರಿಸಿರುವ ಧೋನಿ ನಾಳೆಯ ಪಂದ್ಯದಲ್ಲೂ ದಾಖಲೆಯನ್ನು ಮೆರೆಯುವ ಉತ್ಸಾಹದಲ್ಲಿದ್ದಾರೆ.

Facebook Comments

Sri Raghav

Admin