ಆಧಾರ್ ಸಲ್ಲಿಸಲು ಡಿಸೆಂಬರ್ ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

adhar

ನವದೆಹಲಿ, ಆ.30-ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಬಳಸುವ ಅವಕಾಶವನ್ನು ಕೇಂದ್ರ ಸರ್ಕಾರ ಈ ವರ್ಷದ ಡಿಸೆಂಬರ್‍ವರೆಗೂ ವಿಸ್ತರಿಸಿದೆ. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸುಪ್ರೀಂಕೋರ್ಟ್‍ಗೆ ಇಂದು ಈ ಹೇಳಿಕೆ ನೀಡಿದ್ದು, ಆಧಾರ್ ಗಡುವನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಸೆಪ್ಟೆಂಬರ್ 30 ಆಧಾರ್ ಕಾರ್ಡ್‍ಗೆ ಅಂತಿಮ ಗಡುವಾಗಿತ್ತು.
ಸರ್ಕಾರದ ಯೋಜನೆಗಳ ಫಲಾನುಭವ ಪಡೆಯಲು ಆಧಾರ್ ಕಡ್ಡಾಯ ಕುರಿತ ಪರ ಮತ್ತು ವಿರೋಧ ಅಭಿಪ್ರಾಯಗಳ ಕುರಿತು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ನವೆಂಬರ್ ಮೊದಲ ವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಈ ವಿಷಯದ ಬಗ್ಗೆ ತ್ವರಿತ ವಿಚಾರಣೆ ನಡೆಸುವ ತುರ್ತು ಅಗತ್ಯವಿಲ್ಲ. ನವೆಂಬರ್ ಮೊದಲ ವಾರ ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.

Facebook Comments

Sri Raghav

Admin