ಈ ಬಾರಿಯ ಮೈಸೂರು ದಸರಾದಲ್ಲಿ ಲೋಕಲ್ ‘ಕುಸ್ತಿ’ಗೆ ಆದ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Wresling--01

ಮೈಸೂರು, ಆ.30-ಪ್ರತಿವರ್ಷ ದಸರಾ ಮಹೋತ್ಸವದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಈ ಬಾರಿ ರದ್ದುಪಡಿಸಲಾಗಿದೆ. ದಸರಾ ಕುಸ್ತಿ ಉಪಸಮಿತಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾರಂಪರಿಕ ಕುಸ್ತಿ ಪಂದ್ಯಗಳನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯನ್ನು ಕೈ ಬಿಡಲಾಗಿದೆ.  ಕಳೆದ 10 ವರ್ಷದಿಂದ ದಸರೆಯಲ್ಲಿ ನಡೆಯುತ್ತಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಕಡಿಮೆ ಬಜೆಟ್ ಹಾಗೂ ಸ್ಥಳೀಯ ಕುಸ್ತಿ ಪಂದ್ಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಕೈ ಬಿಡಲು ನಿಶ್ಚಯಿಸಿದೆ.

ರಾಷ್ಟ್ರೀಯ ಕುಸ್ತಿಯನ್ನು ಕೈಬಿಟ್ಟು ಪಾರಂಪರಿಕ ಕುಸ್ತಿಗೆ ಆದ್ಯತೆ ನೀಡುವುದು, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕುಸ್ತಿ ಆಯೋಜಿಸುವುದು, ನಾಡ ಕುಸ್ತಿ ಸ್ಪರ್ಧೆಯನ್ನು ನಗರದ ನಾಲ್ಕು ಭಾಗಗಳಲ್ಲಿ ಆಯೋಜಿಸಿ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಲು ಉಪಸಮಿತಿ ತೀರ್ಮಾನಿಸಿದೆ.

Facebook Comments

Sri Raghav

Admin