ಗೋರಕ್‍ಪುರ್‍ದಲ್ಲಿ ನಿಲ್ಲದ ಮರಣಮೃದಂಗ : 48 ಗಂಟೆಗಳಲ್ಲಿ ಮತ್ತೆ 42 ಮಕ್ಕಳ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

Ghorakpura--01

ಗೋರಖ್‍ಪುರ್, ಆ.30-ಉತ್ತರಪ್ರದೇಶದ ಗೋರಖ್‍ಪುರ್ ಬಾಬಾ ರಾಘವ್ ದಾಸ್ (ಬಿಆರ್‍ಡಿ) ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಸರಣಿ ಸಾವು ಪ್ರಕರಣಗಳು ಮುಂದುವರಿದಿದ್ದು, ಕಳೆದ 48 ಗಂಟೆಗಳಲ್ಲಿ ಮತ್ತೆ 42 ಶಿಶುಗಳು ಮೃತಪಟ್ಟಿವೆ. ಇದರೊಂದಿಗೆ ಕಳೆದ ಎರಡು ವಾರಗಳಲ್ಲಿ ಅಸುನೀಗಿದ ಮಕ್ಕಳ ಸಂಖ್ಯೆ 290ಕ್ಕೇರಿದೆ. 48 ತಾಸುಗಳಲ್ಲಿ 42 ಮಕ್ಕಳು ಸಾವಿಗೀಡಾಗಿದ್ದಾರೆ. ಏಳು ಶಿಶುಗಳು ಎನ್ಸೆಫಾಲಿಟಿಸ್ (ಮಿದುಳು ಜ್ವರ) ಸೋಂಕಿನಿಂದ ಮೃತಪಟ್ಟಿವೆ. ಉಳಿದ ಮಕ್ಕಳು ಇತರ ಕಾರಣಗಳಿಂದ ಕೊನೆಯುಸಿರೆಳೆದಿವೆ ಎಂದು ಬಿಆರ್‍ಡಿ ಮೆಡಿಕಲ್ ಕಾಲೇಜು ಆಸ್ಪತ್ರೆ ಪ್ರಾಂಶುಪಾಲ ಪಿ.ಕೆ.ಸಿಂಗ್ ತಿಳಿಸಿದ್ದಾರೆ.

ಆಗಸ್ಟ್ 1 ರಿಂದ 28ರವರೆಗೆ ಈ ಆಸ್ಪತ್ರೆಯಲ್ಲಿ 290 ಮಕ್ಕಳು ಅಸುನೀಗಿವೆ. ಅಕ್ಯೂಟ್ ಎನ್ಸೆಫಾಲಿಟೀಸ್ ಸಿಂಡ್ರೋಮ್ (ಎಇಸ್) ಸೋಂಕಿನಿಂದ ಮೃತಪಟ್ಟ 77 ಶಿಶುಗಳೂ ಈ ಸಾವಿನ ಸಂಖ್ಯೆಯಲ್ಲಿ ಸೇರಿವೆ.  ಆಗಸ್ಟ್ 27 ಮತ್ತು 28ರಂದು ಎಇಎಸ್‍ನಿಂದ ಮೃತಪಟ್ಟ 7 ಶಿಶುಗಳೂ ಸೇರಿದಂತೆ 36 ಮಕ್ಕಳು ಕೊನೆಯುಸಿರೆಳೆದಿದ್ದು, ಪೆÇೀಷಕರನ್ನು ಆತಂಕಕ್ಕೀಡು ಮಾಡಿದೆ.

Facebook Comments

Sri Raghav

Admin