ಡಿವಿಜಿ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸದಂತೆ ಬಿಬಿಎಂಪಿ ನೋಟೀಸ್ : ವರ್ತಕರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಆ.30-ನಗರದ ಡಿವಿಜಿ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸದಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿರುವುದರಿಂದ ಇಲ್ಲಿನ ವರ್ತಕರಿಗೆ ತೀವ್ರ ಆತಂಕ ಉಂಟಾಗಿದೆ. ಜನವಸತಿ ಪ್ರದೇಶ ಅಂದರೆ 30 ಅಡಿ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ಡಿವಿಜಿ ರಸ್ತೆ ಜನವಸತಿ ಪ್ರದೇಶವಾಗಿದ್ದು, ಇಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಾರದೆಂದು ಬಿಬಿಎಂಪಿ ಅಲ್ಲಿನ ಅಂಗಡಿಗಳವರೆಗೆ ನೋಟಿಸ್ ನೀಡಿದೆ.
ಈ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರಸ್ಥರು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗ ಬಿಬಿಎಂಪಿ ನೋಟಿಸ್ ನೀಡಿರುವುದರಿಂದ 150ಕ್ಕೂ ಹೆಚ್ಚು ಅಂಗಡಿಗಳವರು ಆತಂಕಕ್ಕೊಳಗಾಗಿದ್ದಾರೆ.

ಜೊತೆಗೆ ಅಂಗಡಿಗಳವರು ತಮ್ಮ ಬದುಕು ಬೀದಿಗೆ ಬಿದ್ದಂತಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಸಂಬಂಧ ಆಯುಕ್ತ ಮಂಜುನಾಥ್ ಪ್ರಸಾದ್ ಪ್ರತಿಕ್ರಿಯಿಸಿ ನ್ಯಾಯಾಂಗದ ಆದೇಶದಂತೆ ಡಿವಿಜಿ ರಸ್ತೆಯಲ್ಲಿನ ಅಂಗಡಿಗಳವರಿಗೆ ನೋಟೀಸ್ ಕೊಡಲಾಗಿದೆ. ಆದರೆ ವರ್ತಕರಿಂದ ಇನ್ನೂ ನೋಟಿಸ್‍ಗೆ ಉತ್ತರ ಬಂದಿಲ್ಲ. ಉತ್ತರ ಬಂದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದನ್ನು ತೀರ್ಮಾನಿಸುತ್ತೇವೆ. ಸದ್ಯಕ್ಕೆ ವರ್ತಕರು ಆತಂಕಪಡುವುದು ಬೇಡ ಎಂದು ಹೇಳಿದ್ದಾರೆ.

Facebook Comments

Sri Raghav

Admin