ಮತ್ತಷ್ಟು ಕ್ಷಿಪಣಿಗಳನ್ನು ಉಡಾಯಿಸಲು ಕಲಹಪ್ರಿಯ ಉತ್ತರ ಕೊರಿಯಾ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

North-Korea--01

ಸಿಯೋಲ್/ಟೋಕಿಯೊ, ಆ.30-ಜಪಾನ್ ಮೇಲೆ ಖಂಡಾಂತರ ಕ್ಷಿಪಣಿ ಪ್ರಯೋಗಿಸಿ ವಿಶ್ವಸಂಸ್ಥೆ ಸೇರಿದಂತೆ ಅನೇಕ ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತಷ್ಟು ಕ್ಷಿಪಣಿಗಳನ್ನು ಪೆಸಿಫಿಕ್ ಸಾಗರದತ್ತ ಹಾರಿಸಲು ಉತ್ಸುಕರಾಗಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಲಭಿಸಿದೆ.  ಅಮೆರಿಕ ಮತ್ತು ದಕ್ಷಿಣ ಕೊರಿಯಾದ ವಾರ್ಷಿಕ ಜಂಟಿ ಸಮರಾಭ್ಯಾಸಕ್ಕೆ ಪ್ರತಿಯಾಗಿ ಬೆದರಿಕೆ ಒಡ್ಡುವುದು ಹಾಗೂ ಪೆಸಿಫಿಕ್ ಸಾಗರ ಪ್ರದೇಶದಲ್ಲಿರುವ ಅಮೆರಿಕದ ಗುವಾಂ ಸೇನೆ ನೆಲೆಯಲ್ಲಿ ಚಿಂದಿ ಮಾಡಬಲ್ಲ ತಾಕತ್ತು ತನಗಿದೆ ಎಂದು ತೋರ್ಪಡಿಸುವುದು ಇದರ ಉದ್ದೇಶವಾಗಿದೆ.
ಪೆಸಿಫಿಕ್ ಸಾಗರ ಪ್ರದೇಶದ ಮತ್ತೆ ಇನ್ನೂ ಹೆಚ್ಚಿನ ಕ್ಷಿಫಣಿಗಳನ್ನು ಉಡಾಯಿಸಲು ಸಿದ್ಧತೆ ನಡೆಸುವಂತೆ ಕಿಮ್ ತನ್ನ ಸೇನಾಪಡೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಕೊರಿಯಾ ವಾರ್ತಾ ಸಂಸ್ಥೆಗಳು ತಿಳಿಸಿವೆ.

ಉತ್ತರ ಕೊರಿಯಾ ನಿನ್ನೆ ಪ್ರಯೋಗಿಸಿದ ಕ್ಷಿಪಣಿಯು ಜಪಾನ್ ಉತ್ತರ ಭಾಗದಲ್ಲಿರುವ ಹೊಕ್ಕಾಯಿಡೋದ ಪೆಸಿಫಿಕ್ ಸಾಗರದಲ್ಲಿ ಇಳಿದಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿತ್ತು.  ಪದೇ ಪದೇ ಆಣ್ವಸ್ತ್ರಗಳನ್ನು ಪ್ರಯೋಗಿಸಿ ಆತಂಕ ಸೃಷ್ಟಿಸುತ್ತಿರುವ ಉತ್ತರ ಕೊರಿಯಾ ಮತ್ತೆ ಕ್ಷಿಪಣಿ ಉಡಾಯಿಸಿದೆ ಎಂಬ ಸುದ್ದಿ ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಮತ್ತಷ್ಟು ಕೆರಳಿವೆ. ಈ ಹಿನ್ನೆಲೆಯಲ್ಲಿ ಯುದ್ಧ ಭೀತಿಯ ಕಾರ್ಮೋಡಗಳು ದಟ್ಟೈಸುತ್ತಿವೆ.

Facebook Comments

Sri Raghav

Admin