ಮದ್ಯ ಚಟ ಬಿಡಿಸುವ ಕೇಂದ್ರದಲ್ಲೇ ವ್ಯಕ್ತಿ ಕೊಲೆ..?

ಈ ಸುದ್ದಿಯನ್ನು ಶೇರ್ ಮಾಡಿ

Crime-Scene

ಬೆಂಗಳೂರು, ಆ. 30- ಡ್ರಗ್ಸ್ , ಮದ್ಯದ ಚಟ ಬಿಡಿಸುವ ಪುನರ್ವಸತಿ ಕೇಂದ್ರದಲ್ಲಿ ದಾಖಲಾಗಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಫರ್ಹಾನ್‍ಷರೀಫ್ (38) ಮೃತಪಟ್ಟ ವ್ಯಕ್ತಿ. ಫರ್ಹಾನ್ ಷರೀಫ್ ಮದ್ಯದ ಚಟ ಹೊಂದಿದ್ದು ಈ ದುರಾಭ್ಯಾಸವನ್ನು ಬಿಡಿಸಲು ಬಸವೇಶ್ವರ ನಗರದ ಚರ್ಚ್ ಸ್ಟ್ರೀಟ್ ಬಳಿಯಿರುವ ಮದ್ಯ, ಮಾದಕ ವಸ್ತು ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು.

ಮಧ್ಯರಾತ್ರಿ 12.30ರಲ್ಲಿ ಈತನ ತಮ್ಮ ನದೀಮ್ ಷರೀಫ್ ಎಂಬಾತನಿಗೆ ಪುನರ್ವಸತಿ ಕೇಂದ್ರದ ಮುಖ್ಯಸ್ಥ ಖಲೀಲ್ ಎಂಬುವವರು ದೂರವಾಣಿ ಕರೆ ಮಾಡಿ ನಿಮ್ಮ ಅಣ್ಣ ಫರ್ಹಾನ್ ಬಸವೇಶ್ವರ ನಗರದ ಮೊದಲನೇ ಕ್ರಾಸ್ ಶಾಂಪುರ ಮುಖ್ಯರಸ್ತೆ ಬಳಿ ನಿತ್ರಾಣಗೊಂಡು ಬಿದ್ದಿದ್ದಾನೆ ಎಂದು ಹೇಳಿ ಮೊಬೈಲ್ ಕರೆ ಸ್ಥಗಿತಗೊಳಿಸಿದ್ದಾರೆ.

ಅನುಮಾನಗೊಂಡ ನದೀಮ್ ಅವರು ತನ್ನ ಸ್ನೇಹಿತರೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಣ್ಣನ ಮೇಲೆ ಗಾಯಗಳಾಗಿರುವ ಗುರುತನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ನದೀಮ್ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿ ಖಲೀಲನೇ ನನ್ನ ಅಣ್ಣನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಹೆಣ್ಣೂರು ಠಾಣೆ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಖಲೀಲ್‍ಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin