ಮುಂಬೈ ಮಹಾಮಳೆಗೆ 6 ಬಲಿ, ರಕ್ಷಣೆಗೆ ಧಾವಿಸಿದ ನೌಕಾಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Padna

ಮುಂಬೈ, ಆ.30-ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈವರೆಗೆ 6 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ನೌಕಾಪಡೆ ಧಾವಿಸಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.  ಮಳೆಯಿಂದಾಗಿ ದಹಿಸರ್, ಕಾಂಡವ್ಲಿ, ಮಲಾಡ್ ಮತ್ತು ದಾದರ್ ಪ್ರದೇಶಗಳಲ್ಲಿ ಆರು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮುಳುಗಡೆಯಾಗುತ್ತಿದ್ದ ಕೆಲವರನ್ನು ರಕ್ಷಿಸಲಾಗಿದೆ. ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಅನೇಕರು ಗಾಯಗೊಂಡಿದ್ದಾರೆ.

ಕುಂಭದ್ರೋಣ ಮಳೆಗೆ ಸಿಲುಕಿ ಅತಂತ್ರರಾಗಿರುವ ಸಾವಿರಾರು ಮಂದಿಯ ನೆರವಿಗೆ ಧಾವಿಸಿರುವ ನೌಕಾಪಡೆ ಯೋಧರು ವಿವಿಧ ಸ್ಥಳಗಳಲ್ಲಿ ಸಮುದಾಯ ಅಡುಗೆಮನೆ ತೆರೆದು ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ.  ಜಲಾವೃತವಾಗಿರುವ ಚರ್ಚ್‍ಗೇಟ್, ಪರೇಲ್, ದಾದರ್, ಕುರ್ಲಾ, ಅಂಧೇರಿ, ಘಾಟ್‍ಕೋಪರ್, ನಯನ್, ಖಾರ್‍ವೆಸ್ಟ್, ಬೈಕುಲಾ, ಮುಕುಂದ್, ಮಲಾಡ್, ವೋರ್ಲಿ ಮೊದಲಾದ ಸ್ಥಳಗಳಲ್ಲಿ ಕಮ್ಯುನಿಟಿ ಕಿಚನ್‍ಗಳನ್ನು ಸ್ಥಾಪಿಸಲಾಗಿದೆ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.

ಭಾರೀ ಗಾಳಿ ಮತ್ತು ಮಳೆ ಜೊತೆಗೆ ಸಮುದ್ರದಲ್ಲಿ ಉಬ್ಬರ ಸೃಷ್ಟಿಯಾಗಿದೆ. ಇದರಿಂದ ಮಳೆ ನೀರು ಸಮುದ್ರಕ್ಕೆ ಹರಿದು ಹೋಗುವುದಕ್ಕೆ ಅಡಚಣೆಯಾಗಿದೆ ಅಲ್ಲದೇ ಸಾಗರದ ನೀರೇ ನಗರದೊಳಗೆ ನುಗ್ಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.  ಭಾರೀ ಮಳೆಯಿಂದಾಗಿ ರೈಲು, ಸ್ಥಳೀಯ ರೈಲು, ವಾಹನಗಳು ಮತ್ತು ವಿಮಾನ ಸಂಚಾರ ನಿನ್ನೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅನೇಕ ಪ್ರದೇಶಗಳಲ್ಲಿ ಮನೆ ಮತ್ತು ಇತರ ಕಟ್ಟಡಗಳಿಗೆ ನೀರು ನುಗ್ಗಿದೆ. ಮುಂಬೈನ ಉಪನಗರಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

Mumbai  10

ಕೆಲವು ಸ್ಥಳಗಳಲ್ಲಿ ಪ್ರವಾಹದ ನೀರಿನ ಮಟ್ಟ ಇಳಿದಿದ್ದು, ಬೆರಳಿಣಿಕೆಯಷ್ಟು ರೈಲು ಮತ್ತು ವಾಹನ ಸಂಚಾರ ಪುನರಾರಂಭಗೊಂಡಿದೆ. ಕಚೇರಿಗಳಲ್ಲಿ ಮತ್ತು ರಸ್ತೆಗಳ ಮಧ್ಯೆ ನೀರಿನಲ್ಲಿ ಸಿಲುಕಿದ್ದವರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ.  ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದ್ದರೂ, ತೀವ್ರ ಕಡಿಮೆ ಇರುತ್ತದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ(ಎಸ್‍ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.  ಸಮುದ್ರದಲ್ಲಿ ವಾಯು ಭಾರ ಕುಸಿತದ ಕಾರಣಕ್ಕೆ ಮಳೆ ಆಗಬಹುದು ಎಂದು ಮುನ್ಸೂಚನೆ ನೀಡಲಾಗಿತ್ತು. ಆದರೆ, ಇದು ನಿರೀಕ್ಷೆಗೂ ಮೀರಿದ ಭಾರೀ ಪ್ರಮಾಣದ ವಾಯುಭಾರ ಕುಸಿತವಾಗಿದೆ ಎಂದು ಪುಣೆ ಹವಾಮಾನ ಕೇಂದ್ರದ ವಿಶ್ಲೇಷಕ ಎ.ಕೆ.ಶ್ರೀವಾಸ್ತವ ತಿಳಿಸಿದ್ದಾರೆ.

Mumbai  11

ಅಗತ್ಯ ನೆರವು ಪ್ರಧಾನಿ ಭರವಸೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ದೂರುವಾಣಿಯಲ್ಲಿ ಮಾತನಾಡಿ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

Mumbai  09

Mumbai  08

Mumbai  07

Mumbai  06

Mumbai  04

Mumbai  02 Mumbai  01

Facebook Comments

Sri Raghav

Admin